ಮಂಗಳೂರು, ಮಾ.05 (DaijiworldNews/MB): ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ದಂಧೆಯಲ್ಲಿ ನಿರತರಾಗಿದ್ದ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಅತ್ತಾವರ ನಿವಾಸಿ ನಂದನ್ ಎಸ್ ನಾಯ್ಕ್(35), ಮಣ್ಣಗುಡ್ಡೆ ನಿವಾಸಿ ಪ್ರಶಾಂತ್(47), ಉರ್ವಾದ ಹೊಯಿಗೆಬೈಲ್ ನಿವಾಸಿ ಅನಿಲ್ ಕುಮಾರ್(44), ಕೊಡಿಯಾಲ್ ಬೈಲ್ ನಿವಾಸಿ ದಿನಕರ ಆಳ್ವಾ(44) ಹಾಗೂ ಕಾವೂರು ನಿವಾಸಿ ಅನಿಲ್ ಕುಮಾರ್(42) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ರೂ. 30,130 ನಗದು, 5 ಮೊಬೈಲ್ ಫೋನ್ಗಳು ಸೇರಿ ಒಟ್ಟು 66,130 ರೂಪಾಯಿ ಮೌಲ್ಯದ ಸೊತ್ತುಗಳನ್ನು, ಮಟ್ಕಾ ಬರೆಯುವ ಚೀಟಿಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಂಗಳೂರು ದಕ್ಷಿಣ, ಬರ್ಕೆ, ಮಂಗಳೂರು ಉತ್ತರ, ಕಾವೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.