ಮಂಗಳೂರು, ಮಾ 05 (DaijiworldNews/MS): ಕೆ.ಎಸ್.ಆರ್.ಟಿ.ಸಿ ಬಸ್ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ಸುಗಮ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ ಯುವಕನೋರ್ವ ಬಸ್ಸು ಚಾಲಕನ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆಗೈಯಲು ಪ್ರಯತ್ನಿಸಿರುವ ಘಟನೆ ಮಾ. 5 ರ ಶುಕ್ರವಾರ ನಡೆದಿದೆ.

ಈ ಬಗ್ಗೆ ಪುತ್ತೂರು ಡಿಪೋದ ಕೆಎಸ್ ಆರ್ ಟಿಸಿ ಬಸ್ ಚಾಲಕ ರಾಜು ಗಜಕೋಶ ಇಂದು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಸೋಹಿಫ್ (19) ಪೊಲೀಶರು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ:
ಪುತ್ತೂರು ಡಿಪೋದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ರಾಜು ಗಜಕೋಶ ಇಂದು ಪುತ್ತೂರಿನಿಂದ ಮಂಗಳೂರು ಕಡೆ ಪ್ರಯಾಣ ಮಾಡುತ್ತಿರುವ ರಸ್ತೆಯಲ್ಲಿ ಡಿಯೋ ಸ್ಕೂಟರ್ ಸವಾರ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿದ್ದು, ಇದನ್ನು ಪ್ರಶ್ನೆ ಮಾಡಿದ ಬಸ್ ಚಾಲಕನ ಮೇಲೆ ಬೈಕ್ ಸವಾರ ಸೋಹಿಫ್ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ್ದಾನೆ. ಮಾತ್ರವಲ್ಲದೆ ಸ್ಕೂಟರ್ ನಿಂದ ಇಳಿದು ಬಂದ ಸೋಹಿಫ್ ಬಸ್ ಚಾಲಕ ರಾಜು ಗಜಕೋಶರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಪ್ರಯತ್ನ ನಡೆಸಿದ್ದಾನೆ. ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಕಲಂ 341, 504, 506, 353, 307ರ ಅಡಿ ಪ್ರಕರಣ ದಾಖಲಾಗಿದೆ.