ಕಾಸರಗೋಡು, ಮಾ.05 (DaijiworldNews/PY): ನಗರದ ಮೂರು ಮಳಿಗೆಗಳಲ್ಲಿ ಕಳ್ಳತನ ನಡೆದಿದ್ದು, ನಗದನ್ನು ದೋಚಿದ್ದಾರೆ.






ಹಳೆ ಬಸ್ಸು ನಿಲ್ದಾಣ ಪರಿಸರದ ವಸ್ತ್ರ ಮಳಿಗೆಯ ಶಟರ್ ಮುರಿದು ಒಳನುಗ್ಗಿರುವ ಕಳ್ಳರು 4.80 ಲಕ್ಷ. ರೂ. ಅನ್ನು ಕಳವು ಮಾಡಿದ್ದಾರೆ.
ಕಬ್ಬಿಣದ ಸರಳು ಬಳಸಿ ಶಟರ್ ಮುರಿದು ಮೇಜಿನ ಡ್ರವರ್ನಲ್ಲಿದ್ದ ಹಣವನ್ನು ಕಳವು ಮಾಡಿದ್ದಾರೆ.
ಸಮೀಪದ ಇನ್ನೊಂದು ಕಟ್ಟಡದಲ್ಲಿನ ಫ್ಯಾನ್ಸಿ ಮತ್ತು ವಸ್ತ್ರದ ಮಳಿಗೆಯಲ್ಲೂ ಕಳವು ನಡೆದಿದ್ದು, ಫ್ಯಾನ್ಸಿಯಿಂದ ಒಂದು ಸಾವಿರ ರೂ. ಹಾಗೂ ವಸ್ತ್ರದಂಗಡಿಯಿಂದ ಐದು ಸಾವಿರ ರೂ. ಅನ್ನು ಕಳವು ಮಾಡಲಾಗಿದೆ.
ಕಾಸರಗೋಡು ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದು, ತನಿಖೆ ನಡೆಸುತ್ತಿದ್ದಾರೆ.