ಬೆಂಗಳೂರು , ಆ 01: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಎರಡು ತಿಂಗಳು, ಕಳೆದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆಗೆ ತೆರೆಮರೆಯಲ್ಲಿ ನಡೆಸಿದ್ದಕ್ಕಿಂತ ಜಿಲ್ಲಾ ಉಸ್ತುವರಿ ಸಚಿವರ ಹೊಣೆಗಾರಿಕೆ ಹೆಚ್ಚು ಸರ್ಕಸ್ ನಡೆಸಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮುಂಬರುವ ಲೋಕಸಭಾ ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲೆಗಳ ಜವಾಬ್ದಾರಿ ಹಂಚಿಕೆ ಮಾಡಿರುವುದು ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯಿಂದ ತಿಳಿಯುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಯು.ಟಿ.ಖಾದರ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ.ಜಯಮಾಲಾರಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಮುಖ್ಯಮಂತ್ರಿ ಹೊರತುಪಡಿಸಿ 26 ಸಚಿವರು ಮಾತ್ರ ಸದ್ಯ ಇರುವುದರಿಂದ ನಾಲ್ವರು ಸಚಿವರಿಗೆ ಎರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.
ಡಾ.ಜಿ.ಪರಮೇಶ್ವರ್ - ಬೆಂಗಳೂರು ನಗರ ಮತ್ತು ತುಮಕೂರು, ಆರ್.ವಿ.ದೇಶಪಾಂಡೆ-ಉತ್ತರ ಕನ್ನಡ ಮತ್ತು ಧಾರವಾಡ, ಡಿ.ಕೆ.ಶಿವಕುಮಾರ್-ರಾಮನಗರ ಮತ್ತು ಬಳ್ಳಾರಿ, ಕೆ.ಜೆ.ಜಾರ್ಜ್-ಚಿಕ್ಕಮಗಳೂರು, ರಮೇಶ್ ಜಾರಕಿಹೊಳಿ-ಬೆಳಗಾವಿ, ಶಿವಾನಂದ ಪಾಟೀಲ್-ಬಾಗಲಕೋಟೆ, ಪ್ರಿಯಾಂಕ್ ಖರ್ಗೆ-ಕಲಬುರಗಿ, ರಾಜಶೇಖರ ಬಿ. ಪಾಟೀಲ್-ಯಾದಗಿರಿ, ವೆಂಕಟರಮಣಪ್ಪ-ಚಿತ್ರದುರ್ಗ ಎನ್.ಎಚ್.ಶಿವಶಂಕರ ರೆಡ್ಡಿ-ಚಿಕ್ಕಬಳ್ಳಾಪುರ, ಕೃಷ್ಣ ಭೈರೇಗೌಡ-ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ, ಸಿ.ಪುಟ್ಟರಂಗಶೆಟ್ಟಿ-ಚಾಮರಾಜನಗರ, ಝಮೀರ್ ಅಹ್ಮದ್-ಹಾವೇರಿ, ಜಯಮಾಲ-ಉಡುಪಿ, ಆರ್.ಶಂಕರ್-ಕೊಪ್ಪಳ, ಎನ್.ಮಹೇಶ್-ಗದಗ, ವೆಂಕಟರಾವ್ ನಾಡಗೌಡ-ರಾಯಚೂರು, ಎಸ್.ಆರ್.ಶ್ರೀನಿವಾಸ್-ದಾವಣಗೆರೆ, ಸಿ.ಎಸ್.ಪುಟ್ಟರಾಜು-ಮಂಡ್ಯ, ಸಾ.ರಾ.ಮಹೇಶ್-ಕೊಡಗು, ಬಂಡೆಪ್ಪ ಕಾಶೆಂಪುರ್-ಬೀದರ್, ಎಚ್.ಡಿ.ರೇವಣ್ಣ-ಹಾಸನ, ಡಿ.ಸಿ.ತಮ್ಮಣ್ಣ-ಶಿವಮೊಗ್ಗ, ಎಂ.ಸಿ.ಮನಗೂಳಿ-ಬಿಜಾಪುರ, ಜಿ.ಟಿ.ದೇವೇಗೌಡರವರಿಗೆ ಮೈಸೂರು ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ನೀಡಲಾಗಿದೆ.