ಮಂಗಳೂರು, ಆ 1: ಕರಾವಳಿ ಕ್ರೈಸ್ತರ ಪ್ರೀತಿಪಾತ್ರ ಸಂತ ಪವಾಡ ಪುರುಷ ಸಂತ ಲಾರೆನ್ಸರ ಪುಣ್ಯಕ್ಷೇತ್ರ ಮಂಗಳೂರಿನ ಬೊಂದೇಲ್, ಇದರ ವಾರ್ಷಿಕ ಮಹೋತ್ಸವದ ಹಿನ್ನೆಲೆ ಮೇರಿಹಿಲ್ ಕಾರ್ಮೆಲ್ ಶಾಲೆಯಿಂದ ಪುಣ್ಯಕ್ಷೇತ್ರಕ್ಕೆ ಹಸಿರು ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ಭಾಸ್ಕರ ಮೊಯ್ಲಿ ಚಾಲನೆ ನೀಡಿದರು.
ಬಳಿಕ ವಿವಿಧ ಸಂಘಗಳು ತಂದ ಹೊರೆ ಕಾಣಿಕೆಯ ಮೊರವಣಿಗೆ ನಡೆಯಿತು. ಹಿಂದೂ ಮುಸ್ಲಿಂ ಬಾಂಧವರು ಕೂಡ ಹೊರೆ ಕಾಣಿಕೆ ಮೆರವಣಗೆಯಲ್ಲಿ ಭಾಗವಹಿಸಿದ್ದರು. ಪುಣ್ಯಕ್ಷೇತ್ರದಲ್ಲಿ ವಂ. ಫಾ. ಆಂಡ್ರು ಲಿಯೋ ಡಿಸೋಜ ಹೊರೆ ಕಾಣಿಕೆ ಸ್ವೀಕರಿಸಿದರು. ಈ ಸಂದರ್ಭ ವಂ. ಲಿಯೋ ವೇಗಸ್, ವಂ. ಕ್ಲಿಫರ್ಡ್ ಪಿಂಟೊ, ಪಾಲನ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.
ಇನ್ನು ಆಗಸ್ಟ್ 10ರ ಶುಕ್ರವಾರದಂದು ಕ್ಷೇತ್ರದ ವಾರ್ಷಿಕ ಮಹೋತ್ಸವ ನಡೆಯಲಿದೆ. ಆಗಸ್ಟ್ 1ರಿಂದ 9ರ ತನಕ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಬಲಿಪೂಜೆ, ನೊವೆನಾ ಪ್ರಾರ್ಥನೆ, ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆಗಳು ನಡೆಯಲಿವೆ. ನೊವೆನಾ ಸಂದರ್ಭದಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಪುಣ್ಯಕ್ಷೇತ್ರದಲ್ಲಿ ಮಾಡಲಾಗಿದೆ.