ಮಂಗಳೂರು, ಆ 2: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕನಾಗಿ ಆಯ್ಕೆಗೊಂಡು ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಹಾಗೂ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಯು.ಟಿ. ಖಾದರ್ ಇಂದು ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಅಭಿವೃದ್ಧಿ ವಿಚಾರಗಳ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿದರು.
ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಅವರು ಕೇವಲ ಕಟ್ಟಡವನ್ನು ಮಾತ್ರ ಸುಂದರೀಕರಣಗೊಳಿಸಲಾಗಿದೆ. ಆದರೆ ಕಟ್ಟಡದ ಒಳಗೆ ಬಳಸಿಕೊಂಡಿರುವ ನೀರಿನ ನಳ್ಳಿ, ಅಕ್ವಾಗಾರ್ಡ್, ಇಲೆಕ್ಟ್ರಿಕಲ್ ಸೊತ್ತುಗಳು ಕಳಪೆ ಮಟ್ಟದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಇವುಗಳನ್ನು ಬದಲಾಯಿಸಿ ಗುಣಮಟ್ಟದವುಗಳನ್ನು ಬಳಸುವುದರ ಜೊತೆಗೆ ಇಂದಿರಾ ಕ್ಯಾಂಟೀನ್ಗೆ ಪೂರೈಕೆಯಾಗುವ ತಿಂಡಿಗಳಲ್ಲೂ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಅವರು ಸೂಚನೆ ನೀಡಿದರು.