ಮಂಗಳೂರು, ಆ 5 : ಟಿಕೆಟ್ ಇಲ್ಲದೆ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಿ, ರೈಲ್ವೆ ಹೋರಾಟಗಾರೇ ಸಿಕ್ಕಿ ಬಿದ್ದ ಘಟನೆ ತಡವಾಗಿ ಬೆಳಕಿಗೆ ನಡೆದಿದೆ. ರೈಲ್ವೆ ಹೋರಾಟಗಾರ ಹಾಗೂ ರೈಲ್ವೆ ಅಭಿವೃದ್ಧಿ ಸಮಿತಿಯ ಮಾಜಿ ಸದಸ್ಯರೊಬ್ಬರು ಟಿಕೆಟ್ ಇಲ್ಲದೆ ಪ್ರಯಾಣಿಸಿ ತಪಾಸಣಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ದಂಡ ಪಾವತಿಸಿದ್ದಾರೆ.
ಕಬಕ ಪುತ್ತೂರಿನಿಂದ ಮಂಗಳೂರಿಗೆ ಬರುತ್ತಿದ್ದ ರೈಲನ್ನು ಮಾರ್ಗ ಮಧ್ಯೆ ರೈಲ್ವೆ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಸಂದರ್ಭ ರೈಲ್ವೆ ಹೋರಾಟಗಾರರಲ್ಲಿ ಟಿಕೆಟ್ ಇರಲಿಲ್ಲ ಎನ್ನಲಾಗಿದೆ. ನಾನು ರೈಲ್ವೆ ಅಭಿವೃದ್ಧಿ ಸಮಿತಿಯ ಮಾಜಿ ಸದಸ್ಯ ಎಂದು ಪರಿಚಯಿಸಿದರೂ ಟಿಕೆಟ್ ಅಥವಾ ರೈಲ್ವೆ ಪಾಸ್ ಇಲ್ಲದ ಕಾರಣಕ್ಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ರೈಲ್ವೆ ಹೋರಾಟಗಾರ ರೈಲ್ವೆ ಉನ್ನತಾಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೂ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ಘಟನೆ ಜು.14ರಂದು ನಡೆದಿದ್ದು ಈಗ ಬೆಳಕಿಗೆ ಬಂದಿದೆ. 15 ರೂ. ಪ್ರಯಾಣ ದರಕ್ಕೆ 250 ರೂ. ಸೇರಿಸಿ ಒಟ್ಟು 265 ರೂ. ದಂಡ ಪಾವತಿಸಿ, ಸಹಿ ಮಾಡಿದ್ದಾರೆ ಎಂದು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ