ತಮಿಳುನಾಡು, ಅ 7: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಪಕ್ಷದ ಹಿರಿಯ ನಾಯಕ ಕರುಣಾನಿಧಿ 94ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕರುಣಾನಿಧಿ ತಮಿಳುನಾಡಿನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಸಂಜೆ 6.10ಕ್ಕೆ ಅವರು ನಿಧನರಾಗಿದ್ದಾರೆ.
ಇನ್ನು ಕರುಣಾನಿಧಿ ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆ ಎಲ್ಲಾ ಖಾಸಗಿ, ಸರಕಾರಿ ಸಂಸ್ಥೆಗಳಿಗೆ ಇಂದು ಮಧ್ಯಾಹ್ನದಿಂದಲೇ ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೆ, ಯಾವುದೇ ರೀತಿಯ ಅನಾಹುತಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರವಹಿಸಿದ್ದರು. ಅಲ್ಲದೆ ಕರುಣಾನಿಧಿ ನಿವಾಸದ ಮುಂಭಾಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಲ್ಲದೆ, ಕಾವೇರಿಯ ಆಸ್ಪತ್ರೆಗೆ ಸಾರ್ವಜನಿಕ ಪ್ರವೇಶವನ್ನು ಮಧ್ಯಾಹ್ನದಿಂದಲೇ ನಿಷೇಧಿಸಲಾಗಿತ್ತು. ಇನ್ನು 5 ಬಾರಿ ತಮಿಳುನಾಡಿನ ಸಿಎಂ ಆಗಿ ಅಧಿಕಾರ ನಡೆಸಿದ ಇತಿಹಾಸವನ್ನು ಕರುಣಾನಿಧಿ ಹೊಂದಿದ್ದಾರೆ. ಅಲ್ಲದೆ 13 ಬಾರಿ ವಿಧಾನ ಸಭೆಗೆ ಸ್ಪರ್ಧಿಸಿ ಗೆದ್ದಿದ್ದು, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಹಿಂದಿ ವಿರೋಧಿ ಆಂದೋಲನದಲ್ಲೂ ಕರುಣಾನಿಧಿ ಗುರುತಿಸಿಕೊಂಡಿದ್ದರು.