ಮೂಲ್ಕಿ, ಅ 8: ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮೂಲ್ಕಿ ಬಳಿಯ ಪುನರೂರು ಎಂಬಲ್ಲಿ ನಡೆದಿದೆ. ಕುಂದಾಪುರ ಮೂಲದ ಜೀಪ್ ಕಿನ್ನಿಗೋಳಿ ಮತ್ತು ಮೂಲ್ಕಿಯ ರಾಜ್ಯ ಹೆದ್ದಾರಿಯಲ್ಲಿ ಪುನರೂರು ಬಳಿ ಸಂಚರಿಸುತ್ತಿದ್ದಾಗ ತಿರುವಿನಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡು ನೇರವಾಗಿ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.ಪರಿಣಾಮ ಜೀಪ್ನಲ್ಲಿದ್ದ ಮಹಿಳೆಯೋರ್ವರು ಗಾಯಗೊಂಡಿದ್ದಾರೆ.
ಅವರನ್ನು ಸುರತ್ಕಲ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ನೆಲಕ್ಕುರುಳಿದ್ದು, ರಸ್ತೆ ಸಂಚಾರ ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ವಾಹನಗಳೆಲ್ಲಾ ಎಸ್ಕೋಡಿಯಿಂದ ತೋಕೂರು ಮೂಲಕ ಹೆದ್ದಾರಿಯನ್ನು ತೆರಳಿ ಮೂಲ್ಕಿಯತ್ತ ಸಂಚರಿಸಿದವು. ಮೂಲ್ಕಿಯಿಂದ ಬಂದಂತಹ ವಾಹನಗಳು ಕೆ.ಎಸ್.ರಾವ್ ಮೂಲಕ ತೋಕೂರು ರಸ್ತೆಯಾಗಿ ಕಿನ್ನಿಗೊಳಿಯತ್ತ ಸಂಚರಿಸಿತ್ತು. ಮೆಸ್ಕಾಂ ಇಲಾಖೆಯು ತುಂಡಾಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿತು.