ಬಂಟ್ವಾಳ, ಮಾ 06 (DaijiworldNews/MS): ಬರಿಮಾರು ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಬರಿಮಾರು ಮಾದುಗುಡಿ ನಿವಾಸಿ ನವೀನ್(23) ಮೃತಪಟ್ಟ ಯುವಕ. ಆತ ಮಾ. 2ರಂದು ಬೆಳಗ್ಗೆ ಕೆಲಸಕ್ಕೆಂದು ತೆರಳಿದ್ದು, ಮಧ್ಯಾಹ್ನದ ವೇಳೆ ತಾಯಿಗೆ ಕರೆ ಮಾಡಿ ಮುಳಿಬೈಲು ಗುಡ್ಡದಲ್ಲಿ ವಿಷ ಸೇವಿಸಿರುವುದಾಗಿ ತಿಳಿಸಿದ್ದಾನೆ.
ತಕ್ಷಣ ಮನೆಯವರು ಹಾಗೂ ಆತನ ಸ್ನೇಹಿತರು ಹೋಗಿದ್ದು, ಆತನನ್ನು ಮಾಣಿ ಆರೋಗ್ಯ ಕೇಂದ್ರಕ್ಕೆ ಕೊಂಡುಹೋಗಿ ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.