ಮಂಗಳೂರು, ಮಾ.06 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ-ಉಜಿರೆ ರಸ್ತೆಯಲ್ಲಿ ಅಜಾಗರೂಕತೆಯಿಂದ ವೀಡಿಯೋ ಮಾಡಲು ಹೋದ ಟ್ರಾಫಿಕ್ ಪೊಲೀಸ್ ಅಪಾಯದಿಂದ ಪಾರಾದ ಘಟನೆ ನಡೆದಿದ್ದು, ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಎನ್ನಲಾಗಿದೆ.

ಘಟನೆಯ ವಿವರ:
ಆಟೋ ಚಾಲಕನಿಗೆ ಫೈನ್ ಹಾಕುವಾಗ ಪೊಲೀಸರು ಏಕವಚನದಲ್ಲಿ ಮಾತನಾಡಿದ್ದು, ಈ ವೇಳೆ ಆಟೋ ಚಾಲಕ ಏಕವಚನದಲ್ಲಿ ಮಾತನಾಡಬೇಡಿ, ಬೇಕಿದ್ರೆ ಫೈನ್ ಹಾಕಿ ಎಂದು ಹೇಳಿದ್ದು ಜೊತೆಗೆ ಪೊಲೀಸರನ್ನೇ ಪ್ರಶ್ನಿಸಿ ಆಟೋ ಪ್ರಯಾಣಿಕರು ವೀಡಿಯೋ ಮಾಡಿದ್ದು, ಈ ವೇಳೆ ಪೊಲೀಸ್ ಕಾನ್ಸ್ ಸ್ಟೇಬಲ್ ಕೂಡ ವೀಡಿಯೋ ಮಾಡಿದ್ದಾರೆ.
ಇನ್ನು ವೀಡಿಯೋ ಮಾಡುತ್ತಾ ಪೊಲೀಸ್ ರಸ್ತೆ ಮಧ್ಯೆ ಹೋಗಿದ್ದು, ಈ ವೇಳೆ ಕಾರಿನ ಹಿಂಬದಿ ಚಕ್ರಕ್ಕೆ ಪೊಲೀಸ್ನ ಕಾಲು ಸಿಲುಕಿ ಬಿದ್ದಿದ್ದು, ಭಾರೀ ಅನಾಹುತದಿಂದ ಪಾರಾಗಿದ್ದಾರೆ ಎನ್ನಲಾಗಿದೆ.