ಮಂಗಳೂರು, ಮಾ 06 (DaijiworldNews/MS): " ನಮ್ಮ ಕೈ, ಬಾಯಿ ಶುದ್ದ ಇಟ್ಟುಕೊಂಡಿದ್ದೇವೆ, ಆದರೆ ನಮ್ಮ ವಿರುದ್ಧ ಕೆಲವು ಷಡ್ಯಂತ್ರಗಳು ನಡಿಯುತ್ತಿದ್ದು ಹೀಗಾಗಿ ನ್ಯಾಯಾಲಯದ ಮೆಟ್ಟೀಲೇರಿದ್ದೇವೆ "ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೋರ್ಟ್ ಗೆ ಅರ್ಜಿ ಸಲ್ಲಿಸಿದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ, ನಮ್ಮ ವಿರುದ್ಧ ಕೆಲವು ರಾಜಕೀಯ ಪ್ರೇರಿತ ಷಡ್ಯಂತ್ರಗಳು ನಡಿಯುತ್ತಿದೆನಮ್ಮ ಅವಶ್ಯಕತೆಗೆ ನಾವು ಹೋಗಿದ್ದೇವೆ. ಮುಂಬೈನಲ್ಲಿ ಏನೂ ನಡೆದೇ ಇಲ್ಲ. ನಡೆದಿದ್ದರೆ ಅವರು ದಾಖಲೆ ಬಿಡುಗಡೆ ಮಾಡಲಿ. ನಾವು ಕೈ, ಬಾಯಿ ಶುದ್ದ ಇಟ್ಟುಕೊಂಡಿದ್ದೇವೆ ಎಂದರು.
ಮೈತ್ರಿ ಸರ್ಕಾರ ಕೆಡವಿದರ ಬಗ್ಗೆ ಹಾಗೂ ನಾವು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಟಾರ್ಗೆಟ್ ಮಾಡಲಾಗಿದೆ. ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಅಭಿವೃದ್ಧಿ ಕೆಲಸ ಕಾರ್ಯಗಳನನ್ನು ಮಾಡಲು ಸಾಧ್ಯವಾಗಿದೆ ಎಂದರು.