ಮಂಗಳೂರು, ಮಾ.06 (DaijiworldNews/MB): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಂಗಳೂರು ವಿಭಾಗದಿಂದ, ಮಂಗಳೂರು-ಕಲಬುರಗಿ ಮಾರ್ಗದಲ್ಲಿ ಹೊಸ ನಾನ್ ಎಸಿ ಸ್ಲೀಪರ್ ನೂತನ ಸಾರಿಗೆಯನ್ನು ಮಾರ್ಚ್ 8 ರಂದು ಮಂಗಳೂರು ಬಸ್ಸು ನಿಲ್ದಾಣದ ಆವರಣದಿಂದ ಆರಂಭಿಸಲಿದೆ.

ಸಾರಿಗೆಯು ಮಂಗಳೂರಿನಿಂದ ಸಂಜೆ 4.30 ಗಂಟೆಗೆ ಹೊರಟು, ಉಡುಪಿ 5.45 ಗಂಟೆ, ಕುಂದಾಪುರ 6.45 ಗಂಟೆಗೆ ತಲುಪಲಿದೆ. ಕುಮಟಾದಿಂದ ರಾತ್ರಿ 9 ಗಂಟೆಗೆ ಹೊರಟು, ಅಂಕೋಲಾ 10.15 ಗಂಟೆ, ಯಲ್ಲಾಪುರ 10.50 ಗಂಟೆ, ಹುಬ್ಬಳ್ಳಿ ರಾತ್ರಿ 12.30 ಗಂಟೆಗೆ ತಲುಪಲಿದೆ.
ಮರುದಿನ ಬೆಳಿಗ್ಗೆ 5 ಗಂಟೆಗೆ ವಿಜಯಪುರ ತಲುಪಿ, 6.10 ಗಂಟೆಗೆ ಸಿಂಧಗಿಯಿಂದ, 7.45 ಗಂಟೆಗೆ ಜೇವರ್ಗಿ ಮಾರ್ಗವಾಗಿ ಕಲಬುರಗಿಗೆ ಬೆಳಿಗ್ಗೆ 8.30 ಗಂಟೆಗೆ ತಲುಪಲಿದೆ. ನಂತರ ಕಲಬುರಗಿಯಿಂದ ಮಧ್ಯಾಹ್ನ 2.45 ಗಂಟೆಗೆ ಹೊರಟು ಜೇವರ್ಗಿ 3.45 ಗಂಟೆ, ಸಿಂಧಗಿ ಸಂಜೆ 5 ಗಂಟೆ, ವಿಜಯಪುರ 6.15 ಗಂಟೆ, ಮತ್ತು ರಾತ್ರಿ 10.15 ಗಂಟೆಗೆ ಹುಬ್ಬಳ್ಳಿ ಮಾರ್ಗವಾಗಿ ಮಂಗಳೂರು ತಲುಪಲಿದೆ. ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಟಿಕೆಟ್ ಬುಕ್ಕಿಂಗಾಗಿ ವೆಬ್ಸೈಟ್ ಅಥವಾ ಮಂಗಳೂರು ಬಸ್ಸು ನಿಲ್ದಾಣ: 7760990720, ಉಡುಪಿ ಬಸ್ಸು ನಿಲ್ದಾಣ: 9663266400, ವಿಜಯಪುರ ಬಸ್ಸು ನಿಲ್ದಾಣ : 6366423887, ಕಲಬುರಗಿ ಬಸ್ಸು ನಿಲ್ದಾಣ; 7760992123, ಕುಂದಾಪುರ ಬಸ್ಸು ನಿಲ್ದಾಣ: 9663266009, ಸಿಂಧಗಿ ಬಸ್ಸು ನಿಲ್ದಾಣ: 084-88222055, ಜೇವರ್ಗಿ ಬಸ್ಸು ನಿಲ್ದಾಣ: 7760992124 ಹಾಗೂ ಮುಂಗಡ ಬುಕ್ಕಿಂಗ್ ಕೌಂಟರ್: 9663211553, (ಅವತಾರ್): 6366423880 ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.