ಬಂಟ್ವಾಳ, ಮಾ.06 (DaijiworldNews/MB): 2017 ರ ಮೇ 15 ರಂದು ಬಂಟ್ವಾಳ ತಾಲೂಕಿನ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಾಳ್ತಿಲ ಗ್ರಾಮದ ನಿವಾಸಿ ರಾಜೇಶ್ ಆತನ ದೊಡ್ಡಪ್ಪನ ಮಗ ರಂಜಿತ್ ನನ್ನು ಕೊಲೆ ಮಾಡಿ ಜೈಲು ಸೇರಿದ್ದ ರಾಜೇಶ್ನಿಗೆ ಪ್ರಸ್ತುತ ನ್ಯಾಯಾಲಯ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ಅ. ಕ್ರ 131/2017 ಕಲಂ 447,324,302 ಐಪಿಸಿ ಪ್ರಕರಣದಲ್ಲಿ ಆರೋಪಿ ರಾಜೇಶ್ ಯಾನೆ ನವೀನ್ ಎಂಬುವವನು 2017 ರ ಮೇ 15 ರಂದು ಆರೋಪಿಯ ದೊಡ್ಡಪ್ಪನ ಮಗ ರಂಜಿತ್ ಎಂಬಾತನನ್ನು ಚೂರಿಯಿಂದ ಚುಚ್ಚಿ ಕೊಲೆಗೈದಿದ್ದನು.
ಈ ಬಗ್ಗೆ ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿ ರಾಜೇಶ್ ಯಾನೆ ನವೀನ್ಗೆ ಜೀವಾವಧಿ ಶಿಕ್ಷೆ ನೀಡಿದೆ.