ಮಂಗಳೂರು, ಮಾ 08 (DaijiworldNews/MS): ಮಟ್ಕ ದಂಧೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ನಗರದಲ್ಲಿ 14 ಜನರನ್ನು ಬಂಧಿಸಿದ್ದಾರೆ. ಮಾರ್ಚ್ 6 ರ ಶನಿವಾರ ಐಎಂಒ ರಸ್ತೆಯ ಎ ಬಿ ಟವರ್ಸ್ನಲ್ಲಿರುವ ಸ್ವೀವೆನ್ ಸ್ಟೇಸ್ ಲಾಡ್ಜ್ನಲ್ಲಿ 14 ಜನರು ಜೂಜಾಟದಲ್ಲಿ ತೊಡಗಿದ್ದ ನಡುಮನೆ ಕುಡುಪು ನಿವಾಸಿ ಅಕ್ಷಯ್ (34), ತಾರೆತೋಟದ ಶಶಿಕುಮಾರ್ (44), ಕೆ.ಸಿ.ನಗರ, ತಲಪಾಡಿಯ ಆಸಿಫ್ (40), ಪೆರ್ಮನ್ನೂರಿನ ಅಶೋಕ್ ಡಿ ಸೋಜಾ (48) , ಕಲ್ಲಾಪುವಿನ ಕಾಶಿನಾಥ್ (58) ಬಾಲಿಕಾಶ್ರಮ ರಸ್ತೆಯ ವಿ ಬಶೀರ್,(52) ಆಶೋಕ ನಗರದ ಗುರುಪ್ರಸಾದ್ (45)ಶಕ್ತಿನಗರದ ಸುರೇಶ್ (50) ಜೆಪ್ಪಿನಮೊಗರುವಿನ ರಾಜಶೇಖರ (47) ಹಾಗೂ ಅನಿಲ್ ಕುಮಾರ್ (52), ಜೆಪ್ಪು ಮಜಿಲದ ಸುಧಾಕರ್ ಸನಿಲ್ (52) ಎಂಬರನ್ನ ಬಂಧಿಸಲಾಗಿದೆ.

ಇವರಿಂದ 38,000 ನಗದು, 11 ಮೊಬೈಲ್ ಫೋನ್, ಪ್ಲಾಸ್ಟಿಕ್ ಟೇಬಲ್, ಕುರ್ಚಿಗಳು, ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 1,29,000 ಆಗಿದೆ.ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ಜೂಜಾಟದ ಮತ್ತೊಂದು ಪ್ರಕರಣದಲ್ಲಿ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ತಲಪಾಡಿ ಗ್ರಾಮದ ಕಿನ್ನಿಗೋಳಿ ಮಾರುಕಟ್ಟೆ ಬಳಿಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶ್, ಶ್ರೀನಿವಾಸ್ ಮತ್ತು ರಾಜೇಶ್ ಎಂಬರನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದು 28,410 ನಗದು, ಮೂರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯ 39,410 ವಾಗಿದ್ದು ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.