ಬೆಳ್ತಂಗಡಿ, ಮಾ.08 (DaijiworldNews/MB): ಕಾರು ಹಾಗೂ ಬೈಕ್ ನಡುವೆ ಅಪಘಾತ ನಡೆದ ಅಪಘಾತದಲ್ಲಿ ಬೈಕ್ ಸವಾರ, ಸಹಸವಾರ ಗಂಭೀರ ಗಾಯಗೊಂಡಿರುವ ಘಟನೆ ಉಜಿರೆಯ ನಿಡಿಗಲ್ ಸೀಟು ಕಾಡು ಬಳಿ ನಡೆದಿದೆ.


ಈ ಅಫಘಾತದಲ್ಲಿ ಬೈಕ್ ಸವಾರ ದಿಡುಪೆಯ ಆನಂದ ಎಂಬಾತ ಗಂಭೀರ ಗಾಯಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಿಂಬದಿ ಸವಾರನಾಗಿದ್ದ ದಿಡುಪೆಯ ಹರೀಶ್ಗೆ ಕೂಡಾ ಗಾಯವಾಗಿದ್ದು ಆತ ಉಜಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.