ಮಂಗಳೂರು, ಮಾ.08 (DaijiworldNews/MB): ಬೈಕ್ ಹಾಗೂ ದೇವಾಲಯದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಯ ಮಾಜಿ ಸಂಚಾಲಕನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.


ಬಂಧಿತನನ್ನು ಮೊಂಟೆಪದವು ನಿವಾಸಿ ತಾರನಾಥ ಮೋಹನ್ ಎಂದು ಗುರುತಿಸಲಾಗಿದೆ. ಅವರು ಉಳ್ಳಾಲದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಯ ಮಾಜಿ ಸಂಚಾಲಕರಾಗಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಾರ್ಚ್ 7 ರ ಭಾನುವಾರ ಮಧ್ಯರಾತ್ರಿಯಲ್ಲಿ ಈ ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತಾರನಾಥ ಮೋಹನ್ ಅವರು ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿ ಇರುವ ಮನೆಯೊಂದರಿಂದ ಬೈಕನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.