ಉಡುಪಿ, ಮಾ. 08 (DaijiworldNews/SM): "ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಫೇಸ್ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರವನ್ನು ಮುಂದುವರಿಸಬೇಕು" ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.

ಮಾರ್ಚ್ 8 ರ ಸೋಮವಾರದಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಮಹಾರಾಷ್ಟ್ರ ಮತ್ತು ಕೇರಳದಿಂದ ಆಗಮಿಸುವ ಜನರು ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು. ಇತರ ರಾಜ್ಯಗಳಿಗೆ ಪ್ರಯಾಣಿಸುವವರು 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಇಲ್ಲದಿದ್ದಲ್ಲಿ ಜಿಲ್ಲೆಗೆ ಆಗಮಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು. ನೆಗೆಟಿವ್ ವರದಿಗಳನ್ನು ನೀಡದೆ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವ ಜನರ ಮಾಹಿತಿಯನ್ನು ಹೊಂದಿರುವ ಯಾರಾದರೂ ಅಧಿಕಾರಿಗಳಿಗೆ ತಿಳಿಸಬೇಕು "ಎಂದು ಡಿಸಿ ಹೇಳಿದರು.
"ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 250 ರೂ. ಪಾವತಿಸಿ ಉಚಿತವಾಗಿ ಪಡೆಯಬಹುದು. ಲಸಿಕೆ ಪಡೆಯುವ ದಿನವನ್ನು ಆನ್ಲೈನ್ನಲ್ಲಿ https://selfregistration.cowin.gov.in ಅಥವಾ ಆರೋಗ್ಯಾ ಸೇತು ಅಪ್ಲಿಕೇಶನ್ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ನಿಗದಿಪಡಿಸಬಹುದು ಎಂದಿದ್ದಾರೆ."
"ನೆಟ್ವರ್ಕ್ ವ್ಯಾಪ್ತಿ ಅಥವಾ ಕಂಪ್ಯೂಟರ್ ಅನ್ನು ಹೇಗೆ ನಿರ್ವಹಿಸಬೇಕು ಎಂಬ ತಿಳುವಳಿಕೆ ಇಲ್ಲದ ಹಳ್ಳಿಗಳಲ್ಲಿರುವವರು ಲಸಿಕೆ ಕೇಂದ್ರಕ್ಕೆ ನೇರವಾಗಿ ತಮ್ಮ ಗುರುತಿನ ಚೀಟಿ, ಭಾವ ಚಿತ್ರದೊಂದಿಗೆ ಭೇಟಿ ನೀಡಿ ಲಸಿಕೆ ಪಡೆಯಲು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.