ಬೆಳ್ತಂಗಡಿ, ಮಾ.09 (DaijiworldNews/MB): ಮರ ಕಡಿಯುವ ವೇಳೆಯಲ್ಲಿ ತಪ್ಪಿ ಮರ ಬಿದ್ದು ಮೂವರು ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಬೆಳ್ತಂಗಡಿಯ ಪಟ್ರಮೆ ಗ್ರಾಮದ ಅನಾರು ಬಳಿ ಕಾಯಿಲ ಸಮೀಪ ನಡೆದಿದೆ.






ಮೃತರನ್ನು ಪಟ್ರಮೆ ನಿವಾಸಿಗಳಾದ ಪ್ರಶಾಂತ್ (21), ಸ್ವಸ್ತಿಕ್ (23) ಮತ್ತು ಉಪ್ಪಿನಂಗಡಿಯ ಗಣೇಶ್ (38) ಎಂದು ಗುರುತಿಸಲಾಗಿದೆ.
ಧೂಪದ ಮರವೊಂದನ್ನು ಕಡಿದು ಅದನ್ನು ಉರುಳಿಸುವ ವೇಳೆ ಈ ಮೂವರು ಯುವಕರು ಮರದ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಉಳಿದ 2 ಜನ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಧರ್ಮಸ್ಥಳ ಪೊಲೀಸ್ ಠಾಣೆ ಉಪನಿರೀಕ್ಷಕ ಪವನ್ ಕುಮಾರ್, ಸಿಬ್ಬಂದಿಗಳು ಧಾವಿಸಿದ್ದಾರೆ.