ಮಂಗಳೂರು, ಮಾ.09 (DaijiworldNews/HR): ದಕ್ಷಿಣ ಕನ್ನಡ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘವು ಮಾರ್ಚ್ 9 ರ ಮಂಗಳವಾರ ಗಡಿಯಾರ ಗೋಪುರದ ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿ, "ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದರಿಂದ ಆನ್ಲೈನ್ ಟ್ಯಾಕ್ಸಿ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಇಎಂಐಗಳನ್ನು ಬ್ಯಾಂಕುಗಳಿಗೆ ಪಾವತಿಸಲು, ಅವರ ಕುಟುಂಬಗಳನ್ನು ನಡೆಸಲು ಅಥವಾ ಅವರ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಅವರಿಗೆ ಸಾಧ್ಯವಿಲ್ಲ" ಎಂದರು.
ಇನ್ನು ಕರ್ನಾಟಕ ಸರ್ಕಾರದ ಬಜೆಟ್ನಲ್ಲಿ ನಾವು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೆವು, ಆದರೆ ನಮ್ಮ ಎಲ್ಲ ನಿರೀಕ್ಷೆಗಳು ಕೂಡ ಚೂರುಚೂರಾಗಿದೆ" ಎಂದಿದ್ದಾರೆ.
"ಓಲಾ ಮತ್ತು ಉಬರ್ ಕಂಪನಿಗಳು ಸರ್ಕಾರದ ನಿರ್ದೇಶನದಂತೆ ಮೊತ್ತವನ್ನು ಪಾವತಿಸಬೇಕು, ಆದರೆ ಅದನ್ನು ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಅನಿರ್ದಿಷ್ಟ ಮುಷ್ಕರ ನಡೆಸುತ್ತೇವೆ" ಎಂದು ಹೇಳಿದ್ದಾರೆ.