ಸುಳ್ಯ, ಮಾ. 09 (DaijiworldNews/SM): ತಾಲೂಕಿನ ಕುಕ್ಕುಜಡ್ಕದ ಯುವಕನೋರ್ವ ಅಡಿಕೆ ಕೊಯ್ಯುತ್ತಿದ್ದ ಸಂದರ್ಭ ಕತ್ತಿ ಬಿದ್ದ ಪರಿಣಾಮ ಮರದಿಂದ ಕೆಳಕ್ಕೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಮಾರ್ಚ್ 09ರ ಮಂಗಳವಾರ ನಡೆದಿದಿದೆ.

ಕುಕ್ಕುಜಡ್ಕ ನಿವಾಸಿ ಬಾಬು ಎಂಬವರ ಮಗ ಸಂದೇಶ್ ಮೃತ ಯುವಕ. ಆತನು ತನ್ನ ಸಂಬಂಧಿಕರ ಮನೆಯಾದ ಪಿಲಿಕೋಡ್ ಎಂಬಲ್ಲಿಗೆ ಅಡಿಕೆ ಕೀಳಲು ಹೋಗಿದ್ದ ಸಂದರ್ಭ ಈ ಘಟನೆ ನಡೆದಿದೆ.
ಸಂದೇಶ್ ನ ತೊಡೆಗೆ ಕತ್ತಿ ತಾಗಿದ ಪರಿಣಾಮ ಆತನು ಗಾಯಗೊಂಡ ಪರಿಣಾಮ ಮರದಿಂದ ಕೆಳಗೆ ಬಿದ್ದಿದ್ದಾನೆ. ಬಳಿಕ ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.