ವಿಟ್ಲ, ಮಾ10 (DaijiworldNews/MS): ಬೋಳಂತೂರು ನಾರ್ಶದ ನಿವಾಸಿ ಸೂಫಿ ಮುಕ್ರೀಕರ ಅವರ ಪುತ್ರ ದುಬೈಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಮುತ್ತಲಿಬ್ ಅವರ ಮೊಬೈಲ್ ಹಲವಾರು ದಿನಗಳಿಂದ ಮುತ್ತಲಿಬ್ ಸ್ವಿಚ್ ಆಫ್ ಆಗಿತ್ತು. ಯಾರಿಗೂ ಸಂಪರ್ಕಕ್ಕೆ ಸಿಗದಿದ್ದುದರಿಂದ ಕುಟುಂಬಸ್ಥರು ಆತಂಕಕ್ಕೀಡಾಗಿದ್ದರು.

ಆದರೆ ದುಬೈನ ಅಲ್-ರಫಾದಲ್ಲಿ ಭಾನುವಾರ ಅವರ ಮೃತದೇಹ ಪತ್ತೆಯಾಗಿತ್ತು. ಅಲ್ಲಿನ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆ ನಂತರ ಮುತ್ತಲಿಬ್ ಅವರ ಪಾಸ್ಪೋರ್ಟ್ ಸಂಖ್ಯೆ ಆಧರಿಸಿ, ಭಾರತೀಯ ಪ್ರಜೆ ಎಂದು ಖಚಿತ ಪಡಿಸಿಕೊಂಡ ದುಬೈ ಪೊಲೀಸರು, ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಮೃತದೇಹ ಪತ್ತೆಗೆ ಕರ್ನಾಟಕ ಕಲ್ಚರಲ್ ಫೋರಂ ಸಹಕಾರ ನೀಡಿತ್ತು. ಅದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಡಳಿತದ ಮೂಲಕ ವಿಳಾಸ ಪತ್ತೆ ಹಚ್ಚ ಲಾಯಿತು. ಮೃತದೇಹ ದುಬೈನ ರಾಶೀದ್ ಆಸ್ಪತ್ರೆಯಲ್ಲಿದೆ.
ಮುತ್ತಲಿಬ್ ಅವರು, ಈ ಹಿಂದೆ ಧಾರ್ಮಿಕ ಗುರುವಾಗಿ ಕೆಲಸ ಮಾಡಿಕೊಂಡಿದ್ದು, ಬಳಿಕ ಎಂಜಿನಿಯರಿಂಗ್ ಪದವಿ ಪಡೆದು ದುಬೈಗೆ ತೆರಳಿದ್ದರು. ಮುತ್ತಲಿಬ್ ನಾರ್ಶ ಅಂಕಣ ಬರಹಗಾರರಾಗಿದ್ದರು. ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ.