ಮಂಗಳೂರು, ಮಾ.10 (DaijiworldNews/MB): ನಗರದ ಹೊರವಲಯದಲ್ಲಿರುವ ಉಳ್ಳಾಲ ನಗರಸಭೆ ವ್ಯಾಪ್ತಿಯ ಕಡಲಿಗೆ ಲಾರಿಯಲ್ಲಿ ಒಂದು ಲೋಡ್ ಕಸವನ್ನು ಸುರಿದಿರುವಂತಹ ಘಟನೆ ಮಂಗಳವಾರ ನಡೆದಿದ್ದು ಲಾರಿಯನ್ನು ವಶಕ್ಕೆ ಪಡೆಯಲು ಉಳ್ಳಾಲ ನಗರಸಭೆ ಪೌರಾಯುಕ್ತರು ಖಡಕ್ ಸೂಚನೆ ನೀಡಿದ್ದಾರೆ.





ಉಳ್ಳಾಲ ನಗರದಸಭೆ ವ್ಯಾಪ್ತಿಯಲ್ಲಿ ವಾಹನ ಸಂಖ್ಯೆ ಕೆಎ 19 ಬಿ 7955 ವಾಹನದಲ್ಲಿ ಬಂದವರು ಒಂದು ಲೋಡ್ ಕಸವನ್ನು ಕಡಲಿಗೆ ಸುರಿದಿದ್ದಾರೆ. ಇದರ ವಿಡಿಯೋವನ್ನು ಅಲ್ಲಿದ್ದ ಸ್ಥಳೀಯರು ಮಾಡಿದ್ದಾರೆ. ಹಾಗೆಯೇ ಈ ಲಾರಿಯಲ್ಲಿ ಒಂದು ಕಂಪನಿಯ ತ್ಯಾಜ್ಯ ವಸ್ತುವನ್ನು ತಂದು ಕಡಲಿಗೆ ಸುರಿಯಲಾಗಿದೆ ಎಂದು ಹೇಳಲಾಗಿದೆ.
ನದಿಗಳಿಗೆ ಹಾಗೂ ಕಡಲಿಗೆ ಕಸ ಹಾಕುವ ವಿರುದ್ದ ಇತ್ತೀಚೆಗೆ ಎನ್ಜಿಒಗಳು ಅಭಿಯಾನ ಆರಂಭಿಸಿದೆ. ಆದರೆ ಏತನ್ಮಧ್ಯೆ ಈ ರೀತಿ ಭಾರೀ ಪ್ರಮಾಣದಲ್ಲಿ ಕಸವನ್ನು ತಂದು ಕಡಲಿಗೆ ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃತ್ಯ ಎಸಗಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಜನಸಾಮಾನ್ಯರ ಆಗ್ರಹವಾಗಿದೆ.