ಉಡುಪಿ, ಆ 12 : ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಭಟ್ಕಳ ಗಂಗೊಳ್ಳಿ ನಡುವೆ ಗಾಳಿ ಹೆಚ್ಚಾಗಿ ಕಡಲು ಪ್ರಕ್ಷುಬ್ಧವಾದ ಹಿನ್ನಲೆಯಲ್ಲಿ ಮುಳುಗಡೆ ಯಾಗಿದ್ದು, ಅಪಾರ ನಷ್ಟ ಉಂಟಾಗಿದೆ.ಎರಡು ಪ್ರತ್ಯೇಕ ಬೋಟುಗಳು ಮಲ್ಪೆಗೆ ಮರಳುವ ಸಂದರ್ಭ ಆಳ ಸಮುದ್ರದಲ್ಲಿ ಮುಳುಗಡೆಯಾಗಿದೆ. ಮುಳುಗಡೆಯಾದ ಬೋಟುಗಳಿಂದ 16 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಶಿವಗಣೇಶ ಎಂಬ ಹೆಸರಿನ ಬೋಟು 8 ಜನರೊಂದಿಗೆ ಮೀನುಗಾರಿಕೆಗೆ ತೆರಳಿತ್ತು. ಸಂಜೆಯಾಗುತ್ತಿದ್ದಂತೆ ಗಾಳಿ ಮಳೆಯಿಂದ ಸಮುದ್ರ ಪ್ರಕ್ಷ್ಯಬ್ದವಾಗಿ ಬೋಟ್ ಗೆ ಹಾನಿಯಾಗಿ ತೂತು ಬಿದ್ದು ಬೋಟು ಮುಳುಗಲು ಪ್ರಾರಂಭವಾಯಿತು. ಅಪಾಯದ ಅರಿವಾಗಿ ಮೀನುಗಾರರು ಮಲ್ಪೆಗೆ ಕರೆ ಮಾಡಿ ರಕ್ಷಣೆ ಮಾಡುವಂತೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಮಲ್ಪೆಯಿಂದ ತೆರಳಿದ ಬೇರೊಂದು ಬೋಟಿನಲ್ಲಿ ಮೀನುಗಾರರು ಮುಳುಗಡೆಯಾಗುತ್ತಿದ್ದ ಬೋಟಿನಲ್ಲಿದ್ದ 8 ಮಂದಿಯನ್ನು ರಕ್ಷಿಸಿ ಇನ್ನೊಂದು ಬೋಟಿನಲ್ಲಿ ಮಲ್ಪೆಗೆ ಕರೆತರಲಾಯಿತು.
ಮೀನುಗಾರಿಕೆ ಮುಗಿಸಿ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಬೋಟ್ ಗಂಗೊಳ್ಳಿ ಭಟ್ಕಳದ ನಡುವೆ ಮುಳುಗಡೆಯಾಗಿದೆ. ಮೀನುಗಾರರ ಮಾಹಿತಿ ಮೇಲೆ ಸ್ಥಳಕ್ಕೆ ತೆರಳಿದ ಮಲ್ಪೆಯ ಬೋಟ್ ಅದರಲ್ಲಿದ್ದ 8 ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆ ತಂದಿದ್ದಾರೆ.