ಮಂಗಳೂರು, ಆ 15: “ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯಿಂದ ಹಾನಿ ಪರಿಹಾರಕ್ಕೆ ರಾಜ್ಯ ಸರ್ಕಾರದ ವತಿಯಿಂದ ಈಗಾಗಲೆ ತಹಶೀಲ್ದಾರ್ ಖಾತೆಗೆ 30 ಲಕ್ಷ ಹಣ ಜಮೆ ಮಾಡಲಾಗಿದೆ. ಆದರೆ ಹಾಳಾದ ಸೇತುವೆ, ರಸ್ತೆ ದುರಸ್ತಿ ಮಾಡಲು ಕೇಂದ್ರ ಪ್ಯಾಕೇಜ್ ನೀಡಬೇಕು” ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆ ಹಾನಿ ಕುರಿಂತೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, “ಮಳೆ ನಿಂತ ಬಳಿಕ ಹಾನಿಗೀಡಾದ ರಸ್ತೆ, ಸೇತುವೆ ದುರಸ್ಥಿಯಾಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ೧೦೦ ಕೋಟಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ವಿಪತ್ತು ನಿರ್ವಹಣೆಗೆ ಎನ್ ಡಿ ಆರ್ ಎಫ್ ತಂಡ ಶೀಘ್ರ ಜಿಲ್ಲೆಗೆ ಬಂದು ಅಧ್ಯಯನ ನಡೆಸಲಿದೆ ಎಂದವರು ತಿಳಿಸಿದ್ದಾರೆ.