ಕುಂದಾಪುರ, ಮಾ.11 (DaijiworldNews/PY): ಇಲ್ಲಿನ ಶಾಸ್ತ್ರಿ ಸರ್ಕಲ್ನಲ್ಲಿ ಮಾ.10ರ ಬುಧವಾರದಂದು ಕಾಲೇಜು ವಿದ್ಯಾರ್ಥಿಗಳು ಪುಂಡಾಟ ತೋರಿದ್ದು, ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕಪ್ಪು ಬಣ್ಣದ ಕಾರೊಂದರಲ್ಲಿ ಬಂದ ಐದಾರು ವ್ಯಕ್ತಿಗಳು ಪಿಸ್ತೂಲ್, ಚಾಕು ಹಾಗೂ ಇತ್ಯಾಧಿ ಮಾರಕಾಯುಧಗಳ ಜೊತೆ ಹಲ್ಲೆಗೆ ಮುಂದಾಗಿದ್ದು, ಈ ಸಂದರ್ಭ ತಕ್ಷಣವೇ ಜನ ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮೂರು ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಶ್ರೀಕಾಂತ್, ಎಸ್ಐ ಸದಾಶಿವ ಗವರೋಜಿ ಹಾಗೂ ಪೊಲೀಸರ ತಂಡ ಮೂವರನ್ನು ವಶಪಡಿಸಿಕೊಂಡಿದ್ದು, ಠಾಣೆಗೆ ಕರೆದೊಯ್ದಿದ್ದಾರೆ. ಪರಾರಿಯಾದ ಕಾರು ಹಾಗೂ ಜನರಿಗೆ ಸಿಸಿ ಟಿವಿ ಹಾಗೂ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ.
ಹೊಸ ಬಸ್ ನಿಲ್ದಾಣದ ಬಳಿ ಕೆಲ ದಿನಗಳ ಹಿಂದೆ ಇದೇ ರೀತಿಯಾದ ಘಟನೆ ಸಂಭವಿಸಿದ್ದು, ಕಾಲೇಜು ವಿದ್ಯಾರ್ಥಿಗಳ ತಂಡ ಕಟ್ಟಿಕೊಂಡು ಬಂದಿದ್ದು, ಒಬ್ಬರ ಮೇಲೆ ಹಲ್ಲೆ ನಡೆಸಿದ್ದರು.