ಮಂಗಳೂರು, ಮಾ.11 (DaijiworldNews/PY): ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಮಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.



ಬಂಧಿತರನ್ನು ಕಾಸರಗೋಡು ಮೂಲದ ಮೊಹಮ್ಮದ್ ಅಲಿ ಸಮೀರಾ ಎಂದು ಗುರುತಿಸಲಾಗಿದೆ.
ದುಬೈಯಿಂದ ಏರ್ ಇಂಡಿಯಾ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಈಕೆ ಒಳ ಉಡುಪು ಸೇರಿದಂತೆ, ಸ್ಯಾನಿಟರಿ ಪ್ಯಾಡ್ ಹಾಗೂ ಸಾಕ್ಸ್ನ ಒಳಗಡೆ ಅಕ್ರಮವಾಗಿ ಚಿನ್ನ ಸಾಗಣೆ ಮಾಡಲು ಯತ್ನಿಸಿದ್ದಳು. ಆರೋಪಿಯಿಂದ 1.10 ಕೋಟಿ ರೂ. ಮೌಲ್ಯದ 2.41 ತೂಕದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೋಪ್ಟಾ ನಿಯಮಗಳನ್ನು ಉಲ್ಲಂಘಿಸುವ ವಿದೇಶಿ ಮೂಲದ ಸಿಗರೇಟ್ಗಳನ್ನು ಸಹ ಆಕೆಯಿಂದ ವಶಪಡಿಸಿಕೊಳ್ಳಲಾಗಿದೆ.
ಐಆರ್ಎಸ್ ಉಪ ಆಯುಕ್ತ ಡಾ.ಕಪಿಲ್ ಗಡೆ, ಪ್ರೀತಿ ಸುಮಾ, ರಾಕೇಶ್ ಕುಮಾರ್ ಹಾಗೂ ಕ್ಷಿತಿ ನಾಯಕ್ ತಂಡದ ನೇತೃತ್ವ ವಹಿಸಿದ್ದರು.