ಮಂಗಳೂರು, ಮಾ.11 (DaijiworldNews/HR): ಇಂದು ನಾಡಿನಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿ, ಸಡಗರದಿಂದ ಆಚರಿಸಲಾಗುತ್ತಿದ್ದು, ಮಂಗಳೂರಿನ ವಿವಿಧ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದೆ.




ಶಿವನ ದೇವಾಸ್ಥನಾಗಳಲ್ಲಿ ಇಂದು ಬೆಳ್ಳಗ್ಗಿನಿಂದಲೇ ವಿಶೇಷ ಅಭಿಷೇಕ, ಅರ್ಚನೆ, ಪೂಜೆಗಳು ನಡೆಯುತ್ತಿದ್ದು ಏಕಾಹ ಶಿವರಾತ್ರಿ ಭಜನೆ ಹಾಗೂ ಜಾಗರಣೆ ಕೂಡ ನಡೆಯಲಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದು ಭಕ್ತಾಧಿಗಳು ಬೆಳ್ಳಗ್ಗಿನಿಂದ ದೇವರ ದರ್ಶನ ಪಡೆಯುತ್ತಿದ್ದು, ಉಮಾಮಹೇಶ್ವರ ಹೋಮ, ಮಹಾರುದ್ರಾಭಿಷೇಕ, ಶತ ಸೀಯಾಳ ಅಭಿಷೇಕ ನಡೆಯುತ್ತಿದ್ದು, ರಾತ್ರಿ ವಿಷ್ಟು ಬಲಿ ಉತ್ಸವ ಹಾಗೂ ರಥೋತ್ಸವ, ಕೆರೆದೀಪ, ಮಂಟಪ ಪೂಜೆ ನಡೆಯಲಿದೆ.
ಇನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಮಂಗಳದೇವಿ ದೇವಾಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ, ಪಂಜ ಶ್ರೀ ಪಂಚಲಿಂಗೇಶ್ವರ, ವಿಟ್ಲ ಶ್ರೀ ಪಂಚಲಿಂಗೇಶ್ವರ, ಬಂಟ್ವಾಳದ ಶ್ರೀ ಕಾರಿಂಜೇಶ್ವರ ಸೇರಿದಂತೆ ಸೇರಿದಂತೆ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ ನಡೆಯುತ್ತಿದ್ದು, ರಾತ್ರಿ ಜಾಗರಣೆ ಕೂಡ ನಡೆಯಲಿದೆ.