ಉಡುಪಿ, ಮಾ11 (DaijiworldNews/MS): ರಾಷ್ಟ್ರಕವಿ ಕುವೆಂಪುರವರನ್ನು ಒಮ್ಮೆ ದೂರದರ್ಶನದವರು ದೇಶದ ಉದ್ದಾರಕ್ಕಾಗಿ ಏನು ಮಾಡಬೇಕೆಂದು ಕೇಳಿದಾಗ, ಪ್ರತಿಯೋರ್ವನು ವೈಯಕ್ತಿಕವಾಗಿ ಉದ್ದಾರವಾಗಬೇಕಾಗುವ ಜವಾಬ್ದಾರಿ ನಿರ್ವಹಿಸಲಿ, ದೇಶವು ಸ್ವಭಾವಿಕವಾಗಿ ಉದ್ಧಾರ ಮತ್ತು ಸುದೃಢವಾಗುತ್ತದೆಯೆಂದರು. ವೈವಾಹಿಕ ಜೀವನವು ವ್ಯಾಪಕವಾಗಿ ವಿಫಲವಾಗುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಧಾರ್ಮಿಕ ಮೌಲ್ಯಗಳತ್ತ ಮರಳಬೇಕಾಗಿದೆಯೆಂದು ನ್ಯಾಯವಾದಿ ಹಾಗೂ ನೋಟರಿ ಆಗಿರುವ ಶ್ರೀ ಆತ್ರಾಡಿ ಪೃಥ್ವಿರಾಜ್ ಹೆಗ್ಡೆಯವರು ಹೇಳಿದರು. ಅವರು ಜಮಾಅತೆ ಇಸ್ಲಾಮಿ ಹಿಂದ್ ಹಮ್ಮಿ ಕೊಂಡಿರುವ ‘ಸುದೃಢ ಕುಟುಂಬ, ಸುಭದ್ರ ಸಮಾಜ’ ವೆಂಬ ಅಭಿಯಾನದ ಅಂಗವಾಗಿ ಸ್ಥಾನೀಯ ಜಮಾಅತ್ ಆಯೋಜಿಸಿದ್ದ ವಿಚಾರ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.

ಜನರು ವಿವಿಧ ವಿಷಯಗಳಿಗಾಗಿ ಹೋರಾಡುತ್ತಿದ್ದಾರೆ, ಆದರೆ ಜಮಾಅತೆ ಇಸ್ಲಾಮಿ ಸುಧೃಢ ಕುಟುಂಬ, ಸುಭದ್ರ ಸಮಾಜಕ್ಕಾಗಿ ರಾಷ್ಟ್ರಾದ್ಯಾಂತ ಅಭಿಯಾನವನ್ನೇ ಆರಂಭಿಸಿರುವುದು ಅಭಿನಂದಾರ್ಹವೆಂದು ಉಡುಪಿ ಜಿಲ್ಲಾ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ| ಚೇತನ್ ಲೋಬೊ ಹೇಳಿದರು. ನಮ್ಮ ಜೀವನ ಸಂಗಾತಿಗಳನ್ನು ದೇವರೇ ಆಯ್ಕೆ, ಮಾಡುವುದೆಂಬ ವಿಶ್ವಾಸ ಎಲ್ಲಾ ಧರ್ಮದವರದ್ದಾಗಿದೆ. ಈ ಪವಿತ್ರ ಬುನಾದಿಯ ದಾಂಪತ್ಯ ಜೀವನವು ಏಕೆ ಸುಡಲು ಆರಂಭವಾಗಿದೆಯೆಂದು ಚಿಂತಿಸಬೇಕಾಗಿದೆ. ಇದರ 4 ಕಾರಣಗಳು; ಮಾನವಕೃತ ಧರ್ಮ, ಸಂಸ್ಕೃತಿ, ಸಮಾಜ ಮತ್ತು ಕಾನೂನುಗಳೆಂದರು.
ಇನ್ನೋರ್ವ ಅತಿಥಿ ಉಡುಪಿಯ ಮಹಿಳಾ ಪೊಲಿಸ್ ಸಬ್ ಇನ್ಸ್ ಪೆಕ್ಟರ್ ಶ್ರೀಮತಿ ವೊಯಲೆಟ್ ಫೆಮಿನಾರವರು; ಮಕ್ಕಳ ಉನ್ನತ ಶಿಕ್ಷಣದ ಬಗೆಗೆ ನಾವೆಷ್ಟು ಕಾಳಜಿ ನೀಡುತ್ತೇವೋ ಅಷ್ಟೇ ಕೌಟಂಬಿಕ ಶಿಷ್ಟಾಚಾರ ಮತ್ತು ಸಂಸ್ಕೃತಿಗಳನ್ನೂ ಕಲಿಸುವುದರಲ್ಲಿ ತೋರಿದರೆ ಎದೆಹಾಲು ಉಣಿಸಿ, ಬೆಳಿಸಿದ ಮಾತಾಪಿತರನ್ನು ವೃದ್ಧಾಶ್ರಮಗಳಿಗೆ ಬಿಟ್ಟು ಬರುವಂತಹ ಶೋಚನೀಯ ಪರಿಸ್ಥಿತಿಯನ್ನು ನಾವು ಕಾಣಬೇಕಾಗಿಲ್ಲ ವೆಂದರು.
ಇನ್ನೋರ್ವ ಅತಿಥಿ ಉಡುಪಿಯ ಪ್ರಖ್ಯಾತ ಮನೋರೋಗ ತಜ್ಙ ಡಾ| ಪಿ ವಿ ಭಂಡಾರಿಯವರು ತಮ್ಮ ವಿಚಾರವನ್ನು ಮಂಡಿಸುತ್ತಾ ‘ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ’ಯೆಂದು ಶಿವರಾಮಕಾರಂತರು ಹೇಳಿದ್ದರು. ಮಕ್ಕಳ ಮಾನಸಿಕ ಸೂಕ್ಷ್ಮತೆಯನ್ನು ಗಮನಿಸಬೇಕು. ಮನೆಯ ವಾತಾವರಣ ಅತಿ ಪ್ರಮುಖ. ಪ್ರೀತಿಯ, ಅನ್ಯೋನ್ಯತೆ ಅಗತ್ಯವಿದೆ. ಉಪದೇಶವಲ್ಲ, ಮಾದರಿಯಾಗಿ ತೋರಿಸಿಯೆಂದರು,
ಉಡುಪಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ ಶ್ರೀಮತಿ ಕಾವೇರಿಯವರು ‘ಕೋವಿಡ್ ಸಂದರ್ಭದಲ್ಲಿ ಕೌಟಂಬಿಕ ಹಿಂಸೆಗಳು 100% ಹಾಗೂ ವಿವಾಹ ವಿಚ್ಛೇಧನಗಳು 100% ಹೆಚ್ಚಿವೆಯೆಂದರು ಸಂಘಟನೆ, ಸಾಮೂಹಿಕ ಜೀವನ ಎಲ್ಲಾ ಜೀವಿಗಳಲ್ಲಿ ಕಾಣಬಹುದು, ನಾವು ಮಾನವರು ಪಡಕೊಂಡ ಒಳ್ಳೆಯ ಸಂಸ್ಕ್ರತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು. ನಮ್ಮ ಜವಾಬ್ದಾರಿಗಳನ್ನು ಅರಿಯಬೇಕು. ಕೇವಲ ಆಕಾಂಕ್ಷೆ ಸಾಲದು, ಶ್ರಮ ಬೇಕು, ಶಿಸ್ತಿಗೆ ಆದ್ಯತೆ ವಿರಬೇಕು. ಇನ್ನೊಬ್ಬರಿಗಾಗಿ ಪ್ರೀತಿ ಮತ್ತು ಕರುಣೆ ವಿಶ್ವಾಸ. ಒಳ್ಳೆಯ ಅರಿವು ಮತ್ತು ಸಂಯಮ ತ್ಯಾಗಗಳಿದ್ದರೆ, ಆದರ್ಶ ಕುಟುಂಬವಾಗಲು ಸಾಧ್ಯ. ಮೋಕ್ಷದ ಗುರಿಗಾಗಿ ಪರಸ್ಪರ ಬೆಂಬಲವಿದ್ದರೆ ಆರೋಪ ಪ್ರತ್ಯಾರೋಪ ಮಾಡದೆ, ಅತ್ಯಂತ ಸಂಯದಿಂದ ವಾತಾವರಣವನ್ನು ನಿಯಂತ್ರಿಸಬಹುದು. ಮಗು ಭವಿಶ್ಯದ ಕುಟುಂಬವೆಂಬ ಅರಿವು ಬೇಕು ಯೆಂದರು,
ಅಧ್ಯಕ್ಷೀಯ ಭಾಷಣ ಮಾಡಿದ ಜಮಾಅತೆ ಇಸ್ಲಾಮಿ ಕರ್ನಾಟಕ ಘಟಕದ ಕಾರ್ಯದರ್ಶಿಯಾಗಿರುವ ಮುಹಮ್ಮದ್ ಕುಞಯವರು ‘ಏಪಿಜೆ ಕಲಾಮ ಕಲಾಮರ ಒಂದು ಉಕ್ತಿಯನ್ನು ಉದ್ದರಿಸುತ್ತಾ ನಿಮ್ಮ ಮನಸ್ಸು ಶ್ರೀಮಂತವಾಗಿದ್ದರೆ, ನಿಮ್ಮ ವಕ್ತಿತ್ವ, ಮತ್ತು ಚಾರಿತ್ರ್ಯ ಸುಂದರವಾಗಿರುವುದು. ಮನೆಯಲ್ಲಿ ಸಾಮರಸ್ಯ, ಇದ್ದರೆ ಶಾಂತಿಯ ಕೇಂದ್ರವಾಗುವುದು, ಸಮಾಜ, ಆಮೇಲೆ ದೇಶ ಸಮೃದ್ಧಿಯಾಗುವುದು , ಪ್ರತಿಯೊಬ್ಬನ ಯಶಸ್ವಿನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆಯೆನ್ನಲಾಗುತ್ತದೆ. ನಾನು ಹೇಳುತ್ತೇನೆ ಅಮ್ಮನ ಪಾತ್ರವಿರುತ್ತದೆ. ಪ್ರತಿಯೊಬ್ಬರೂ ಸಕುಟುಂಬವಾಗಿಯೇ ಲೋಕಕ್ಕೆ ಬಂದಿರವುದಾಗಿ ದೆವೀಕ ಗೃಂಥಗಳು ಹೇಳುತ್ತವೆ. ಕುಟುಂಬ ಸಂತೃಪ್ತವಾಗಿರಬೇಕಂದು ಪ್ರವಾದಿಯವರು ಹೇಳಿರುವರು, ಎರಡನೇಯದು ಪತ್ನಿಗ ಮರ್ಯಾದೆ, ಘನತೆ ನೀಡಬೇಕು. ಮಕ್ಕಳನ್ನೂ ಗೌರವಿಸಿರಿ ಎಂದಿದ್ದಾರೆ. ನಿಮ್ಮ ತಂದೆ- ತಾಯಿಯೇ ಸ್ವರ್ಗವೂ ನರಕವೂಯೆಂದಿದ್ದರು ಪ್ರವಾದಿಗಳು, ತಂದೆ ತಾಯಿ ಪರಿಗಣಿಸದೆ ಇರುವುದು ಅರಾಜಕ ಸಮಾಜ. ಬಂಡವಾಳಶಾಹಿತ್ವದ ವ್ಯಾಪಾರೀಕರಣ, ಲಿಬರಲಿಸಮ್ ಎಲ್ಲಾ ನೈತಿಕತೆಯನ್ನು ಬಿಟ್ಟು ಸ್ವೇಚ್ಛಾಚಾರಕ್ಕೆ ಬಲಿಯಾಗಿದೆಯೆಂದರು.
ಮುಂಜಾನೆ ಏಳುವ ಪರಿಶ್ರಮದ ಪ್ರತಿಭಾವಂತ ಸಭ್ಯ ಹುಡುಗ ಹಿಟ್ಲರ್ ಬಾಲ್ಯದಲ್ಲಿ ತಾಯಿಯನ್ನು ಕಳಕೊಂಡ ನಂತರ ಕ್ರೌರ್ಯಕ್ಕೆ ಒಳಗಾದ. ಒಳ್ಳೆಯ ಮನೆಯ ವಾತಾವರಣವಿರುತ್ತಿದ್ದರೆ ಹಿಟ್ಲರ್ ಓರ್ವ ನಿರ್ಮಾಣಾತ್ಮಕ ವ್ಯಕ್ತಿಯಾಗಿರುತ್ತಿದ್ದ. ಯಾವ ಕುಟುಂಬದಲ್ಲಿ ಸಂತೃಪ್ತತೆ ಇಲ್ಲವೋ ಅಲ್ಲಿ ಅಪರಾಧಿಗಳಾಗುವರು, ಮನೆಯಂದರೆ ಶಾಂತಿಯಧಾಮ, ಕುಟುಂಬ ಸಂಬಂದದ ಬಗ್ಗೆ ಕುರಾನ್ ನಲ್ಲಿ ಅತಿ ಹೆಚ್ಚು ಪ್ರಸ್ತಾಪವಿದೆಯೆಂದರು. ನಿಸಾರ್ ಅಹಮದ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗವಿತ್ತರು.