ಪುತ್ತೂರು, ಮಾ11 (DaijiworldNews/MS): ಗೋಡಂಬಿ ಬೀಜ ತಿನ್ನುವಾಗ ಗಂಟಲಲ್ಲಿ ಸಿಲುಕಿ ಬಾಲಕನೋರ್ವ ಮೃತಪಟ್ಟ ಘಟನೆ ಪುತ್ತೂರಿನ ಸಾಲ್ಮರ ಊರಮಾಲ್ ಎಂಬಲ್ಲಿ ಮಾ.10 ರ ಬುಧವಾರ ನಡೆದಿದೆ. ಸಾಲ್ಮರದ ಉರಮಾಲ್ ನಿವಾಸಿ ಇಸಾಕ್ ಎಂಬವರ ಮೂರುವರೆ ವರ್ಷ ಪ್ರಾಯದ ಪುತ್ರ ಮೃತಪಟ್ಟ ಬಾಲಕ.

ಈತ ಮನೆಯಲ್ಲಿ ಬುಧವಾರ ಗೋಡಂಬಿ ತಿನ್ನುತ್ತಿದ್ದ ವೇಳೆ ಆಕಸ್ಮಿಕವಾಗಿ ಗಂಟಲಲ್ಲಿ ಸಿಲುಕಿ ಉಸಿರಾಟಕ್ಕೆ ತೊಂದರೆಯಾಗಿ ಅಸ್ವಸ್ತಗೊಂಡಿದ್ದು, ತಕ್ಷಣವೇ ಬಾಲಕನನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಆದರೆ ಈ ವೇಳೆಗಾಗಲೇ ಬಾಲಕ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಸಾಲ್ಮರ ಸಯ್ಯದ್ ಮಲೆ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಸಲಾಯಿತು. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.