ಮಂಗಳೂರು, ಮಾ.11 (DaijiworldNews/MB) : ಕೆಂಜಾರಿನಲ್ಲಿ ಕಪಿಲ ಗೋಶಾಲೆಯನ್ನು ಕೆಡವಿದರ ವಿರುದ್ಧ ಮತ್ತು ಗೋವುಗಳಿಗೆ ಗೋಶಾಲೆ ಪುನರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಮಾರ್ಚ್ 11 ರ ಗುರುವಾರ ಮಿನಿ ವಿಧಾನ ಸೌಧದ ಎದುರು ವಂದೇ ಮಾತರಂ ಗೋ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.





ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಆನಂದ್ ಅಡ್ಯಾರ್, "300 ಹಸುಗಳಿಗೆ ಆಶ್ರಯ ನೀಡುವಂತಹ ಗೋಶಾಲೆಯನ್ನು ಪುನರ್ನಿರ್ಮಿಸಬೇಕಾಗಿದೆ. ಕೆಂಜಾರಿನಲ್ಲಿ ಗೋಶಾಲೆಯನ್ನು ನಾಶಮಾಡಲು ಯಾರೋ ಒಬ್ಬರು ಆಡಳಿತವನ್ನು ಪ್ರಚೋದಿಸಿದ್ದಾರೆ. ನಮ್ಮ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿರುವ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ'' ಎಂದು ಹೇಳಿದರು.
"ನಾವು ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಗೌರವಿಸುತ್ತೇವೆ. ಆದಾಗ್ಯೂ, ಅವರು ಪ್ರಕಾಶ್ ಶೆಟ್ಟಿಯನ್ನು ಹಸುಗಳ ದಲ್ಲಾಳಿ ಮತ್ತು ಮಾರಾಟಗಾರ ಎಂದು ಆರೋಪಿಸಿದ್ದಾರೆ. ಇದು ಸರಿಯಲ್ಲ. ಪ್ರಭಾಕರ್ ಭಟ್ ತಕ್ಷಣ ಕ್ಷಮೆಯಾಚಿಸಬೇಕು. ಪ್ರಕಾಶ್ ಶೆಟ್ಟಿ ಅವರು ಕಟೀಲಿ ದೇವಸ್ಥಾನಕ್ಕೆ ಬ್ರಹ್ಮಕಲಶವನ್ನು ದಾನ ಮಾಡಿದವರು. ನೀವು (ಪ್ರಭಾಕರ್ ಭಟ್) ಧೈರ್ಯದಿಂದ ಬನ್ನಿ, ಧರ್ಮಸ್ಥಳಕ್ಕೆ ಅಲ್ಲ, ಕಟೀಲಿಗೆ ಬಂದು ದೇವರ ಮುಂದೆ ದೈರ್ಯದಿಂದ ಈ ಆರೋಪ ಮಾಡಿ'' ಎಂದು ಸವಾಲು ಹಾಕಿದರು.