ಕಾಸರಗೋಡು, ಮಾ.11 (DaijiworldNews/HR): ಜಿಲ್ಲೆಯಲ್ಲಿ ಗುರುವಾರ 117 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 126 ಮಂದಿ ಗುಣಮುಖರಾಗಿದ್ದಾರೆ.

ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ 1,154 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 1,053 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ 7,570 ಮಂದಿ ನಿಗಾದಲ್ಲಿದ್ದು, ಇದುವರೆಗೆ 30,349 ಮಂದಿಗೆ ಸೋಂಕು ದೃಢಪಟ್ಟಿದ್ದು, 28,907 ಮಂದಿ ಗುಣಮುಖರಾಗಿದ್ದಾರೆ.