ಮಂಜೇಶ್ವರ, ಮಾ12 (DaijiworldNews/MS): ಏಪ್ರಿಲ್ 6 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮಂಜೇಶ್ವರ ಕ್ಷೇತ್ರದಿಂದ ವಿ . ವಿ . ರಮೇಶನ್ ರವರನ್ನು ಕಣಕ್ಕಿಳಿಸಲು ಸಿಪಿಎಂ ಜಿಲ್ಲಾ ಸಮಿತಿ ತೀರ್ಮಾನಿಸಿದೆ.ಕಾಞ0 ಗಾಡ್ ನಗರಸಭಾ ಮಾಜಿ ಅಧ್ಯಕ್ಷರಾಗಿರುವ ರಮೇಶನ್ ರವರನ್ನು ಕಣಕ್ಕಿಳಿಸಲು ಬುಧವಾರ ನಡೆದ ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ.

ಸ್ಥಳೀಯರಾದ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ . ಆರ್ ಜಯಾನಂದ ಅಥವಾ ಶಂಕರ ರೈ ಮಾಸ್ಟರ್ ರವ ರವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿತ್ತಾದರೂ ಪಕ್ಷದಲ್ಲಿ ಅಪಸ್ವರ ಕೇಳಿಬಂದ ಹಿನ್ನಲೆಯಲ್ಲಿ ವಿ . ವಿ ರಮೇಶನ್ ರವರನ್ನು ಕಣಕ್ಕಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾಗಿರುವ ರಮೇಶನ್ ರವರು ಡಿ ವೈ ಎಫ್ ಐ ರಾಜ್ಯ ಕೋಶಾಧಿಕಾರಿ ಯಾಗಿಯೂ `ಸೇವೆ ಸಲ್ಲಿಸಿದ್ದಾರೆ. 2006 ರಲ್ಲಿ ಸಿ . ಎಚ್ ಕುಞ0ಬು ರವರ ಮೂಲಕ ಸಿಪಿಎಂ ಅಚ್ಚರಿಯ ಗೆಲುವು ಸಾಧಿಸಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಬಳಿಕದ 2011, 2016 ಮತ್ತು 2019 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತ್ತು. ಈ ಬಾರಿ ಪ್ರಬಲ ಪೈಪೋಟಿ ನೀಡುವ ನಿಟ್ಟಿನಲ್ಲಿ ಯುವ ಮುಖಂಡರೋರ್ವರನ್ನು ಕಣಕ್ಕಿಳಿಸಲಾಗಿದೆ. ಯು ಡಿ ಎಫ್ ನಿಂದ ಮುಸ್ಲಿಂ ಲೀಗ್ ಸ್ಪರ್ಧಿಸುತ್ತಿದ್ದು , ಅಭ್ಯರ್ಥಿ ನಾಳೆ ಘೋಷಣೆ ಯಾಗಲಿದೆ. ಮಂಜೇಶ್ವರ ಬ್ಲಾಕ್ ಪಂಚಾಯತ್ ಮಾಜಿ ಸದಸ್ಯ ಎ . ಕೆ . ಎಂ ಅಶ್ರಫ್ ಹೆಸರು ಮುಂಚೂಣಿಯಲ್ಲಿದೆ . ಬಿಜೆಪಿಯಿಂದ ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್ ಅಥವಾ ರಾಜ್ಯಾಧ್ಯಕ್ಷ ಕೆ . ಸುರೇಂದ್ರನ್ ಹೆಸರು ಕೇಳಿ ಬರುತ್ತಿದೆ.