ಬೆಳ್ತಂಗಡಿ, ಮಾ12 (DaijiworldNews/MS): ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ನಲ್ಲಿ ಯುವಕ ಮಹಮ್ಮದ್ ಇರ್ಫಾನ್ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಬುಧವಾರ ನಡೆದಿದ್ದು ಯುವಕನನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಮಹಮ್ಮದ್ ಇರ್ಫಾನ್
ಮಿತ್ತ ಬಾಗಿಲಿನಲ್ಲಿ ಎಸೆಸೆಲ್ಸಿ ಓದುತ್ತಿದ್ದ ಬಾಲಕಿಗೆ ಇನ್ ಸ್ಟಾಗ್ರಾಂ ನಲ್ಲಿ ಆರೋಪಿ ಪರಿಚಿತನಾಗಿದ್ದ ಬುಧವಾರ ಯುವತಿ ಅಜ್ಜಿ ಮನೆ ಧರ್ಮಸ್ಥಳಕ್ಕೆ ಸರಕಾರಿ ಬಸ್ಸಿನಲ್ಲಿ ತೆರಳುತ್ತಿದ್ದಾಗ ಅದೇ ಬಸ್ಸಿನಲ್ಲಿದ್ದ ಆರೋಪಿ ಆಕೆಯ ಕೈಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣ ಬಂಧಿಸಿರುವ ಧರ್ಮಸ್ಥಳ ಪೊಲೀಸರು ಆತನ ವಿರುದ್ದ ಕೇಸು ದಾಖಲಿಸಿಕೊಂಡಿದ್ದಾರೆ.