ಮಂಗಳೂರು, ಮಾ12 (DaijiworldNews/MS): ನಗರದ ಹೊರವಲಯದಲ್ಲಿರುವ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಸಮುದ್ರಕ್ಕೆ ಲಾರಿಯಲ್ಲಿ ಒಂದು ಲೋಡ್ ಕಸವನ್ನು ಸುರಿದಿರುವಂತಹ ಘಟನೆ ಸಂಬಂಧಪಟ್ಟಂತೆ, ಮಾ.11ರ ಗುರುವಾರ ಉಳ್ಳಾಲ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು, ಉಳ್ಳಾಲ ನಗರಸಭೆಗೆ ಒಪ್ಪಿಸಿದ್ದಾರೆ.


ಉಳ್ಳಾಲ ನಗರದಸಭೆ ವ್ಯಾಪ್ತಿಯಲ್ಲಿ ಲಾರಿಯೊಂದು ಥರ್ಮಕೋಲ್ ಸಹಿತ ಒಂದು ಲೋಡ್ ಕಸವನ್ನು ಸಮುದ್ರಕ್ಕೆ ಮಾ.9 ರ ಮಂಗಳವಾರ ಸುರಿದಿದ್ದರು. ಈ ಘಟನೆಯಲ್ಲಿ ಅಲ್ಲಿದ್ದ ಸ್ಥಳೀಯರು ಚಿತ್ರೀಕರಿಸಿದ್ದರು. ಈ ಘಟನೆ ಉಳ್ಳಾಲ ನಗರಸಭೆಯ ಗಮನಕ್ಕೆ ಬರುತ್ತಿದ್ದಂತೆ ಪೌರಾಯುಕ್ತರು ಲಾರಿಯನ್ನು ವಶಕ್ಕೆ ಪಡೆಯುವಂತೆ ಸೂಚಿಸಿದ್ದರು.
ಅದರಂತೆ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಪುರಸಭೆಗೆ ಹಸ್ತಾಂತರಿಸಿದ್ದಾರೆ. ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯುವವರ ವಿರುದ್ದ ಪುರಸಭೆಗೆ 1 ಲಕ್ಷದವರೆಗೆ ದಂಡ ವಿಧಿಸುವ ಅಧಿಕಾರವಿದೆ.