ಕಾಸರಗೋಡು, ಮಾ.12 (DaijiworldNews/PY): ಎಪ್ರಿಲ್ 6 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಯುಡಿಎಫ್ನಿಂದ ಎರಡು ಕ್ಷೇತ್ರಗಳಿಗೆ ಸ್ಪರ್ಧಿಸುವ, ಮುಸ್ಲಿಂ ಲೀಗ್ ಅಭ್ಯರ್ಥಿಗಳನ್ನು ಘೋಷಿಸಿದೆ.

ಮಂಜೇಶ್ವರದಿಂದ ಯುವ ಮುಖಂಡ ಎ.ಕೆ.ಎಂ.ಅಶ್ರಫ್ ಅವರನ್ನು ಕಣಕ್ಕಿಳಿಸಲಾಗಿದೆ. ಮೊದಲ ಬಾರಿ ಮುಸ್ಲಿಂ ಲೀಗ್ ಸ್ಥಳೀಯ ಅಭ್ಯರ್ಥಿಯೋರ್ವರನ್ನು ಕಣಕ್ಕಿಳಿಸುತ್ತಿದೆ.
ಚೆರ್ಕಳಂ ಅಬ್ದುಲ್ಲ, ಪಿ. ಬಿ.ಅಬ್ದುಲ್ ರಜಾಕ್ ಹಾಗೂ ಎಂ.ಸಿ ಖಮರುದ್ದೀನ್ ಕ್ಷೇತ್ರದ ಹೊರಗಿನವರಾಗಿದ್ದಾರೆ. ಕಾಸರಗೋಡಿನಿಂದ ಹಾಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅವರನ್ನು ಮೂರನೇ ಬಾರಿ ಕಣಕ್ಕಿಳಿಸಲಾಗಿದೆ.
ಅಶ್ರಫ್ ಅವರು 2011 ರಿಂದ 15 ರ ತನಕ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. 2015 ರಿಂದ 2021 ರ ತನಕ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 2019ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎಂ.ಸಿ ಕಮರುದ್ದೀನ್ ಅವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ.