ಮಲ್ಪೆ,ಮಾ 13 (DaijiworldNews/MS): ಮಲ್ಪೆ ಬೀಚ್ ನಲ್ಲಿ ಕುಳಿತಿರುವ ವೇಳೆ ಪರ್ಸ್ ನಲ್ಲಿದ್ದ ಇರಿಸಲಾಗಿದ್ದ ಸುಮಾರು 2.50 ಲಕ್ಷ ರೂ ಮೌಲ್ಯದ ಚಿನ್ನದ ಒಡವೆಗಳು ಕಳವಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನ ಪ್ರವೀಣ್ ಕುಮಾರ್ ಎಂಬವರು ತಮ್ಮ ಕುಟುಂಬದ ವರೊಂದಿಗೆ ಪ್ರವಾಸಕ್ಕಾಗಿ ಮಲ್ಪೆಬೀಚ್ ಗೆ ಫೆ.9ರಂದು ಅವರೆಲ್ಲರೂ ಈಜಾಡಲೆಂದು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ತಮ್ಮಲ್ಲಿದ್ದ ಚಿನ್ನಾಭರಣ ಗಳನ್ನು ಪರ್ಸ್ನಲ್ಲಿ ಹಾಕಿ ಪ್ರವೀಣ್ ಅವರ ಅತ್ತೆ ಬಳಿ ಕೊಟ್ಟು ಎಲ್ಲರು ನೀರಿಗೆ ಇಳಿದಿದ್ದರು. ವಾಪಾಸು ಮೇಲೆ ಬಂದು ನೋಡಿದಾಗ ಪರ್ಸ್ ನಲ್ಲಿದ್ದ ಒಡವೆಗಳು ಕಳವಾಗಿತ್ತು. ಈ ಬಗ್ಗೆ ಅತ್ತೆಯವರಲ್ಲಿ ವಿಚಾರಿಸಿದಾಗ ತನಗೆ 10 ನಿಮಿಷ ನಿದ್ದೆ ಬಂದ ಹಾಗಾಯಿತು ಎಚ್ಚರವಾಗಿ ನೋಡುವಾಗ ಪರ್ಸ್ ಖಾಲಿಯಾಗಿತ್ತು ಎಂದವರು ತಿಳಿಸಿದ್ದಾರೆ.
ಪರ್ಸ್ ನಲ್ಲಿ 4ಚಿನ್ನದ ಉಂಗುರ, 9 ಬಿಳಿ ಹರಳಿನ ಉಂಗುರ, ಒಂದು ಚಿನ್ನದ ಸರ, 1 ಕರಿಮಣಿ ಸರ ಸೇರಿದಂತೆಒಟ್ಟು 48.5 ಗ್ರಾಂ ಚಿನ್ನಾಭರಣ ಇತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.