ಉಡುಪಿ, ಮಾ 13 (DaijiworldNews/MS): ಉಡುಪಿಯಲ್ಲಿ ತಾಂಟ್ರೆ ಬಾ ತಾಂಟ್ ಡೈಲಾಗ್ ಮತ್ತೆ ಸದ್ದು ಮಾಡುತ್ತಿದೆ. ಕಾರ್ಯಕ್ರಮ ಒಂದರಲ್ಲಿ ರಾಜಕೀಯ ನಾಯಕರೊಬ್ಬರು ಹೇಳಿದ್ದ ಈ ಡಯಲಾಗ್ ತುಳುನಾಡಿನಾದ್ಯಾಂತ ಸದ್ದು ಮಾಡಿತ್ತು. ಇದೀಗ ಉಡುಪಿಯ ಕಲ್ಯಾಣಪುರದಲ್ಲಿ ಮತ್ತೆ ಈ ಪದ ಪ್ರಯೋಗ ಕಾಣಿಸಿಕೊಂಡಿದೆ.


ಸಂತೆಕಟ್ಟೆಯಿಂದ ಕಲ್ಯಾಣಪುರದ ವರೆಗೆ ನೂತನವಾಗಿ ಅಗಲೀಕರಣಗೊಂಡಿರುವ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬಗಳಲ್ಲಿ ಈ ಹೇಳಿಕೆಯ ಬೋರ್ಡ್ ಗಳು ಕಾಣಿಸಿಕೊಂಡಿವೆ.
ಬೋರ್ಡ್ ನ ಕೆಳಭಾಗದಲ್ಲಿ "ಮೆಸ್ಕಾಂ" ಹೆಸರನ್ನು ಕೂಡಾ ಉಲ್ಲೇಖಿಸಿರುವುದು ಕಂಡು ಬಂದಿದೆ. ಈ ರಸ್ತೆ ಇತ್ತೀಚಿಗಷ್ಟೇ ಅಗಲೀಕರಣಗೊಂಡಿದ್ದು ರಸ್ತೆಯ ಎರಡು ಬದಿಗಳಲ್ಲಿ ಇರುವ ವಿದ್ಯುತ್ ಕಂಬಗಳು ಕೆಲವೊಂದು ಕಡೆಗಳಲ್ಲಿ ಸ್ಥಳಂತರವಾಗದೇ ಹಾಗೇಯೇ ಇದ್ದು ಈ ಹಿನ್ನಲೆಯಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯಲ್ಲಿ ಬೋರ್ಡ್ ಹಾಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೀಗ ಮೆಸ್ಕಾಂ ಕೂಡಾ ಕಾರ್ಯಪ್ರವತ್ತವಾಗಿದ್ದು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಚಾಲ್ತಿಯಲ್ಲಿದೆ.