ಮಂಗಳೂರು, ಮಾ.13(DaijiworldNews/PY): ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಮಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಮಾ.13ರ ಶನಿವಾರದಂದು ಬಂಧಿಸಿದ್ದಾರೆ.


ಬಂಧಿತನನ್ನು ಕೇರಳದ ಕೊಪ್ಪಾ ಮೂಲದ ಮಮ್ಮಿನಿ ಖಾಲಿದ್ (45) ಎಂದು ಗುರುತಿಸಲಾಗಿದೆ.
ಈತ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಬಂದಿದ್ದು, ವಿಶೇಷವಾಗಿ ತಯಾರಿಸಿದ ಒಳ ಉಡುಪಿನಲ್ಲಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾನೆ.
ಖಾಲೀದ್ನಿಂದ ಸುಮಾರು 33,75,470 ಲಕ್ಷ ಮೌಲ್ಯದ 737 ಗ್ರಾಂ. ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಐಆರ್ಎಸ್ನ ಡೆಪ್ಯುಟಿ ಕಮೀಷನರ್ ಅವಿನಾಶ್ ಕಿರಣ ರೊಂಗಾಲಿ, ಭೊಮ್ಕಾರ್, ರಾಕೇಶ್ ಕುಮಾರ್ ಹಾಗೂ ಬಿಕ್ರಮ್ ಚಕ್ರವರ್ತಿ ಹಾಗೂ ಇತರರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.