ಬಂಟ್ವಾಳ, ಮಾ.13 (DaijiworldNews/PY): ದ.ಕ ಜಿಲ್ಲಾ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಂದಾಳು, ಬಿ.ಸದಾನಂದ ಪೂಂಜಾ (80) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು.

ಸಜೀಪಮೂಡ ಗ್ರಾಮದ ಅಭಿವೃದ್ದಿಯ ರೂವಾರಿಯಾಗಿ ಗುರುತಿಸಿಕೊಂಡಿದ್ದ ಸದಾನಂದ ಅವರು, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸಹಿತ ಎಲ್ಲಾ ರಂಗಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಇವರು ಸಜೀಪ ಪಾಗಣೆಯ ಆಡಳಿತಗಾರರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದು, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೂಡಾ ಕರ್ತವ್ಯ ನಿರ್ವಹಿಸಿದ್ದರು.
ಸುಭಾಷ್ನಗರ ಶಾರದೋತ್ಸವ ಸಮಿತಿ, ಸುಭಾಷ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ ಹಾಗೂ ಸಜೀಪಮೂಡದಲ್ಲಿ ಸ.ಪ.ಪೂ. ಕಾಲೇಜು ಸ್ಥಾಪನೆಗೆ ಸದಾನಂದ ಅವರು ಪ್ರಮುಖ ಕಾರಣೀಕರ್ತರಾಗಿದ್ದರು.