ಮಂಗಳೂರು, ಮಾ.13 (DaijiworldNews/HR): ಪ್ರೇಕ್ಷಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯತೀನ್ ರಾಜ್ ವಿರುದ್ಧ ಉಳ್ಳಾಲ ಪೊಲೀಸರು ಕೇಸು ದಾಖಲಿಸಿದ್ದಾರೆ.

ಕುಂಪಲ ಆಶ್ರಯ ಕಾಲನಿ ನಿವಾಸಿ ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್ ಪ್ರೇಕ್ಷಾ(17) ಮಾರ್ಚ್ 10 ರಂದು ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯತೀನ್ ರಾಜ್ ಮತ್ತು ಆಶ್ರಯ ಕಾಲೋನಿಯ ಸೌರಭ್ ಮತ್ತು ಸುಹಾನ್ ಬಂಧಿಸಲಾಗಿದೆ.
ಪ್ರೇಕ್ಷಾ ಸಾವಿಗೆ ಗಾಂಜಾ ವ್ಯಸನಿಗಳೇ ಕಾರಣ ಎಂದು ಆರೋಪಿಸಲಾಗಿದ್ದು, ಮಾರ್ಚ್ 14 ರ ಭಾನುವಾರ ಬೆಳಿಗ್ಗೆ 7 ಗಂಟೆಗೆ ಕುಂಪಲ ಆಶ್ರಯ ಕಾಲನಿಯಿಂದ ಕುಂಪಲ ಶಾಲಾ ಮೈದಾನಕ್ಕೆ ಮಾದಕ ವ್ಯಸನದ ವಿರುದ್ಧ ಮೆರವಣಿಗೆ ನಡೆಯಲಿದೆ.