ಉಡುಪಿ, ಮಾ.13 (DaijiworldNews/HR): ಐಡಿವೈಎಂ ಫೌಂಡೇಶನ್ ಆಯೋಜಿಸಿದ್ದ ಬಾಹ್ಯಾಕಾಶ ಪರಿಶೋಧನ ಕಾರ್ಯಕ್ರಮದಲ್ಲಿ ಉಡುಪಿಯ ಪ್ರತಿಷ್ಟಿತ ಶಾರದಾ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.







ಆನ್ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ತಮ್ಮ 22 ನೇ ವಯಸ್ಸಿನಲ್ಲಿ ಸ್ಯಾಟ್ ಲೈಟ್ ಅನ್ನು ನಿರ್ಮಾಣ ಮಾಡಿದ್ದ ಐಐಟಿ ಬಾಂಬೆ ಇಲ್ಲಿಯ ವಿದ್ಯಾರ್ಥಿ ರತ್ನೇಶ್ ಮಿಶ್ರಾ, ಮತ್ತು ಐಡಿವೈಎಂ ಸಂಸ್ಥೆಯ ಮುಖ್ಯಸ್ಥರುಗಳು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಮೂರು ವರ್ಷಗಳ ಹಿಂದೆ ನಾಸಾ ಸಂಸ್ಥೆಗೆ ಭೇಟಿ ನೀಡಿದ್ದ ಶಾರದಾ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳಾದ ತನಿಷ್ಕಾ, ರುಚಿಕಾ ವಿ.ಬಿ, ಅನೂಪ್ ಬಡಿಗೇರ್, ಸರ್ಮಥ್ ಎಸ್ ರೆಡ್ಡಿ ಮತ್ತು ಶಾಲಾ ನಿರ್ದೇಶಕರಾದ ಡಾಕ್ಟರ್ ವಿದ್ಯಾವಂತ ಆಚಾರ್ಯ ಅವರು ನಾಸಾ ದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ವೇಳೆ ಮಾತನಾಡಿದ ಶಾರದಾ ರೆಸಿಡೆನ್ಶಿಯಲ್ ಶಾಲೆಯ ನಿರ್ದೇಶಕರಾದ ಡಾಕ್ಟರ್ ವಿದ್ಯಾವಂತ ಆಚಾರ್ಯ ಅವರು ಮಾತನಾಡಿ, "2018 ರಲ್ಲಿ ನಾವು ನಾಸಾ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ್ದೆವು. ಈ ಸಂಧರ್ಭದಲ್ಲಿ ಅಲ್ಲಿನ ಕಾರ್ಯ ವೈಖರಿಯ ಕುರಿತು ಅರಿಯುವ ಅವಕಾಶ ಲಭಿಸಿತ್ತು. ಶೀಘ್ರದಲ್ಲಿ ನಾವು ನಮ್ಮ ವಿದ್ಯಾರ್ಥಿಗಳಿಗಾಗಿ ಬಾಹ್ಯಾಕಾಶ ಲ್ಯಾಬ್ ಒಂದನ್ನು ಸ್ಥಾಪಿಸಲಿದ್ದೇವೆ" ಎಂದರು.
ಈ ಸಂಧರ್ಭದಲ್ಲಿ ಶಾಲಾ ಪ್ರಾಂಶುಪಾಲ ಡಾಕ್ಟರ್ ಎಂ ರಾಮಚಂದ್ರನ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.