ಉಡುಪಿ, ಮಾ.13 (DaijiworldNews/HR): ರೇಣುಕಾ ಗೋಪಾಲಕೃಷ್ಣ ಪೆರಂಪಳ್ಳಿ 108 ಸೂರ್ಯ ನಮಸ್ಕಾರಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ "ಕರ್ನಾಟಕ ಎಚಿವರ್ ಬುಕ್ ಆಫ್ ರೆಕಾರ್ಡ್"ನಲ್ಲಿ ರಾಷ್ಟ್ರ ಮಟ್ಟದಲ್ಲಿ ದಾಖಲೆ ನಿರ್ಮಿಸಿರುತ್ತಾರೆ. ಅವರನ್ನು ಚೇತನ್ ಆರ್. ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಸಿಎಸ್ಪಿ ಉಡುಪಿರವರು ಸಿ.ಎಸ್.ಪಿ. ಕೇಂದ್ರ ಕಛೇರಿಯಲ್ಲಿ ಆಚರಿಸಿದ 'ವಿಶ್ವ ಮಹಿಳಾ ದಿನಾಚರಣೆ'. ವಿಶೇಷ ಕಾರ್ಯಕ್ರಮದಲ್ಲಿ ಪುರಸ್ಕರಿಸಿರುತ್ತಾರೆ.

ಚೇತನ್ ಆರ್, ಐಪಿಎಸ್ ಪೊಲೀಸ್ ಅಧೀಕ್ಷಕರು ಸಿ.ಎಸ್.ಪಿ.ಉಡುಪಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ , ಪ್ರವೀಣ್ ಹೆಚ್.ನಾಯಕ್ ಡಿ.ವೈ.ಎಸ್.ಪಿ. ಸಿ.ಎಸ್.ಪಿ.ಉಡುಪಿ, ಪ್ರಮೋದ್ ಕುಮಾರ್ ಪಿ.ಐ.ಗುಪ್ತವಾರ್ತೆ ಸಿ.ಎಸ್.ಪಿ.ಉಡುಪಿ, ಅನಂತ ಪದ್ಮನಾಭ ಪಿ.ಐ. ಸಿ.ಎಸ್.ಪಿ. ಮಲ್ಪೆ , ಉಡುಪಿ. ಮಂಜುಳಾ ಗೌಡ ಎಎಓ ಸಿ.ಎಸ್.ಪಿ. ಮಲ್ಪೆ , ಗೋಪಾಲಕೃಷ್ಣ ಶಾಖಾಧೀಕ್ಷಕರು ಸಿ.ಎಸ್.ಪಿ.ಉಡುಪಿ, ಸಿ.ಎಸ್.ಪಿ. ಕೇಂದ್ರ ಕಛೇರಿ ಉಡುಪಿಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂಧಿಯವರು ಉಪಸ್ಥಿತರಿದ್ದರು.