ಕಾಸರಗೋಡು, ಮಾ.13 (DaijiworldNews/HR): ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಏಪ್ರಿಲ್ 4 ರಿಂದ 7ರ ವರೆಗೆ ಗಡಿಯಲ್ಲಿ ತಪಾಸಣೆ ತೀವ್ರಗೊಳಿಸಲು ತೀರ್ಮಾನಿಸಲಾಗಿದ್ದು, ವಿವಿಧ ಇಲಾಖೆಗಳ ನೇತೃತ್ವದಲ್ಲಿ ಜಂಟಿ ತಪಾಸಣೆ ನಡೆಸಲಾಗುವುದು.

ಚುನಾವಣೆಯನ್ನು ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಗಳ ಅಧಿಕಾರಗಳೊಂದಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಂಗಳೂರು, ಕೊಡಗು, ಕಣ್ಣೂರು, ಕಾಸರಗೋಡು ಜಿಲ್ಲೆಗಳ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದರು.
ಪೊಲೀಸ್, ಅಬಕಾರಿ, ಕಂದಾಯ ಇಲಾಖೆಗಳು ಜಂಟಿಯಾಗಿ ತಪಾಸಣೆ ನಡೆಸಲಿದ್ದು, ಶಾಶ್ವತ ಅಪರಾಧಿಗಳ ಮಾಹಿತಿ ಸಂಗ್ರಹಿಸಿ ಗಡಿ ಪ್ರದೇಶಗಳು ಪರಸ್ಪರ ಹಸ್ತಾಂತರ ನಡೆಸಲು ಸಭೆ ನಿರ್ಧರಿಸಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಸಹಾಯಕ ಅಬಕಾರಿ ಕಮೀಷನರ್ ಬಾಬು ವರ್ಗೀಸ್, ಕಸ್ಟಂಸ್ ಕಮೀಷನರ್ ಇಮಾಮುದ್ದೀನ್ ಅಹಮ್ಮದ್, ಆದಾಯ ತೆರಿಗೆ ಅಧಿಕಾರಿ ಪ್ರೀತಾ ನಂಬ್ಯಾರ್, ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್, ಎಸ್.ಪಿ., ಡೆಪ್ಯೂಟಿ ಅಬಕಾರಿ ಕಮೀಷನರ್, ಕಣ್ಣೂರು ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎನ್.ದೇವಿದಾಸ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ , ಎಸ್.ಪಿ., ಮಂಗಳೂರು ಅಬಕಾರಿ ಕಮೀಷನರ್, ಕಸ್ಟಂಸ್ ಕಮೀಷನರ್, ಆದಾಯ ತೆರಿಗೆ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.