ನವದೆಹಲಿ, ಆ.17: ದೇಶದ ವಾಸಯೋಗ್ಯ ನಗರಗಳ ಪಟ್ಟಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ ಮಂಗಳೂರು 41ನೇ ಸ್ಥಾನವನ್ನು ಪಡೆದುಕೊಂಡಿದೆ.
ಕಳೆದ ಕೆಲ ದಿನಗಳ ಹಿಂದೆ ದೇಶದ ವಾಸಯೋಗ್ಯ 111 ನಗರಗಳ ಪಟ್ಟಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿತ್ತು. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ 111 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮಂಗಳೂರು 41ನೇ ಸ್ಥಾನವನ್ನು ಪಡೆದುಕೊಂಡಿದೆ.
ಸಚಿವಾಲಯ ಮೊದಲ ಬಾರಿಗೆ ಈ ರೀತಿಯ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಂಗಳೂರು ಸೇರಿದಂತೆ ಕರ್ನಾಟಕದ 7 ಪ್ರಮುಖ ನಗರಗಳು ದೇಶದ ವಾಸಯೋಗ್ಯ ನಗರಗಳ ಪಟ್ಟಿಗೆ ಸೇರಿಕೊಂಡಿದೆ. ಮಂಗಳೂರು 41ನೇ ಸ್ಥಾನ ಪಡೆದುಕೊಂಡರೆ, ಬೆಳಗಾವಿ 52ನೇ ಸ್ಥಾನ, ಹುಬ್ಬಳ್ಳಿ- ಧಾರವಾಡ 57ನೇ ಸ್ಥಾನ, ಬೆಂಗಳೂರು 58ನೇ ಸ್ಥಾನ, ಶಿವಮೊಗ್ಗ 67ನೇ ಸ್ಥಾನ, ತುಮಕೂರು 70ನೇ ಸ್ಥಾನ, ದಾವಣಗೆರೆ 8ನೇ ಸ್ಥಾನ ಪಡೆದುಕೊಂಡಿದೆ.