ಮಂಗಳೂರು, ಮಾ. 15 (DaijiworldNews/HR): ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳು ಮತ್ತು ಒಂದು ವಿಮಾ ಕಂಪನಿಯ ಖಾಸಗೀಕರಣದ ಘೋಷಣೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕ್ ನೌಕರರು ಬ್ಯಾಂಕ್ ಯೂನಿಯನ್ಗಳ ಆಯುಕ್ತ ವೇದಿಕೆ ನೀಡಿದ ಕರೆ ಪ್ರಕಾರ ಪ್ರತಿಭಟನೆ ಆರಂಭಿಸಿದ್ದಾರೆ.






ಪ್ರತಿಭಟನೆಯಲ್ಲಿ ಜಿಲ್ಲೆಯಾದ್ಯಂತ 2 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಭಾಗವಹಿಸುತ್ತಿದ್ದು, ಈ ಪ್ರತಿಭಟನೆ ಮಾರ್ಚ್ 16 ರ ಮಂಗಳವಾರವೂ ಮುಂದುವರಿಯಲಿದೆ.
ಪ್ರತಿಭಟನಾಕಾರರು ಸೋಮವಾರ ಬೆಳಿಗ್ಗೆ ನಗರದ ಬಲ್ಮಠ ವೃತ್ತದ ಬಳಿ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ನಗರದ ಮಿನಿ ವಿಧಾನ ಸೌಧಾ ಮುಂದೆ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರದಿಂದಾಗಿ ಬ್ಯಾಂಕ್ ಗ್ರಾಹಕರು ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ.