ಮಂಗಳೂರು, ಆ.17: ಮೀನುಗಾರಿಕೆ ನೆಡಸಲು ಹೊರಟಿದ್ದ ಬೋಟ್ನಿಂದ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರನೊಬ್ಬ ಸತತ 6 ಗಂಟೆಗಳ ಕಾಲ ನೀರಿನಲ್ಲಿ ಈಜಿ ಸುರಕ್ಷಿತವಾಗಿ ಮರಳಿ ಬಂದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ತಮಿಳುನಾಡಿನ ಕಾರ್ಮಿಕ ನಾಗರಾಜ್ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ವ್ಯಕ್ತಿ. ಇವರು ಗುರುವಾರ ಬೆಳಗ್ಗೆ ಮೀನುಗಾರಿಕೆಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸಮುದ್ರದಲ್ಲಿ ಸಂಜೆಯ ವೇಳೆ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್ನಲ್ಲಿದ್ದ ತಮಿಳುನಾಡಿನ ಕಾರ್ಮಿಕ ನಾಗರಾಜ್ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದರು. ತಕ್ಷಣವೇ ಅವರ ರಕ್ಷಣೆಗೆ ಮುಂದಾಗಿದ್ದರೂ ನಾಗರಾಜ್ ಅವರ ಸುಳಿವು ಸಿಕ್ಕಿರಲಿಲ್ಲ.
ನಾಗರಾಜ್ ಅವರ ಪತ್ತೆಗಾಗಿ ಸುಮಾರು 40 ಬೋಟ್ಗಳಲ್ಲಿ ಸಮುದ್ರದಲ್ಲಿ ಹುಡುಕಾಟ ನಡೆಸಲಾಗಿತ್ತು. ಎಷ್ಟೇ ಹುಡುಕಾಡಿದರೂ ನಾಗರಾಜ್ ಮಾತ್ರ ಪತ್ತೆಯಾಗಿರಲಿಲ್ಲ. ಇದೀಗ, ಎನ್.ಎಂ.ಪಿ.ಟಿಯಿಂದ ಹೊರಟ ಕೋಸ್ಟ್ ಗಾರ್ಡ್ ನೌಕೆಯವರು ನಾಗರಾಜ್ ಅವರನ್ನು ರಕ್ಷಿಸಿದ್ದಾರೆ.
ತಮಿಳುನಾಡಿನ ಕಾರ್ಮಿಕ ನಾಗರಾಜ್ ಸಮುದ್ರದಲ್ಲಿ ಸುಮಾರು 6 ಗಂಟೆಗಳ ಕಾಲ ಈಜಾಡಿ ಸಾವನ್ನು ಗೆದ್ದಿದ್ದಾರೆ.