ಮಂಗಳೂರು ಆ 19 : ಕೇರಳ ರಾಜ್ಯದ ಪ್ರಕೃತಿ ವಿಕೋಪದ ಪ್ರವಾಹ ಪೀಡಿತ ಪ್ರದೇಶಗಳ ನೆರೆ ಸಂತ್ರಸ್ತರಿಗೆ ಹಾಲನ್ನು ನೇರವಾಗಿ ಕಾಯಿಸದೆ ಸೇವಿಸಲು ಅನುಕೂಲವಾಗುವಂತೆ ಆಗಸ್ಟ್ 18 ರಂದು 17,000 ಲೀಟರ್ ತೃಪ್ತಿ ಹಾಲಿನ ಪ್ರಥಮ 2 ವಾಹನಗಳಿಗೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ: ಬಿ.ವಿ. ಸತ್ಯನಾರಾಯಣರವರು ನಿಶಾನೆ ಬಾವುಟ ತೋರಿಸಿ ಚಾಲನೆ ನೀಡಿದರು. ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ತೃಪ್ತಿ ಹಾಲನ್ನು ವಿಶೇಷ ರಿಯಾಯತಿ ದರದಲ್ಲಿ ಪಡೆದು, ಕೇರಳ ರಾಜ್ಯದ ನೆರೆ ಸಂತ್ರಸ್ತರಿಗೆ 96,000 ಲೀಟರ್ ತೃಪ್ತಿ ಹಾಲನ್ನು ಉಚಿತವಾಗಿ ನೀಡಲು ಯೋಜನೆ ರೂಪಿಸಿದೆ. ಅದರಂತೆ ಒಕ್ಕೂಟದ ಸಾಮಾಜಿಕ ಕಳಕಳಿ ಯೋಜನೆಯೊಂದಿಗೆ ತೃಪ್ತಿ ಹಾಲನ್ನು ಲಾಭರಹಿತವಾಗಿ ವಿತರಣೆ ಮಾಡಲು ಆಡಳಿತ ಮಂಡಳಿ ವ್ಯವಸ್ಥೆ ಮಾಡಿರುತ್ತದೆ.