ಕೊಡಗು ಆ 19: ಮಹಾಮಳೆಯಿಂದಾಗಿ ಕೊಡಗಿನಲ್ಲಿ ಸಂಭವಿಸುತ್ತಿರುವ ಅನಾಹುತಗಳು ಮುಂದುವರಿದಿದೆ. ಮನೆ , ಕಾಫಿ ತೋಟದೊಂದಿಗೆ ಬೆಟ್ಟಗುಡ್ಡಗಳು ಕೂಡಾ ಜಲಪ್ರವಾಹಕ್ಕೆ ಕೊಚ್ಚಿ ಹೋಗುತ್ತಿದೆ. ಈ ನಡುವೆ ಮಡಿಕೇರಿಯ ಮುಕ್ಕೋಡ್ಲು ವ್ಯಾಲಿವ್ಯೂವ್ ಹೋಮ್ಸ್ಟೇನಲ್ಲಿ 40 ಮಂದಿ ಸಿಲುಕಿದ್ದು, ಸಂಕಷ್ಟದಲ್ಲಿದ್ದಾರೆ. ಸೇನೆಯಾಗಲಿ ಅಥವಾ ಪೊಲೀಸರಾಗಲಿ ಇಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ.
ಭಾರಿ ಮಳೆ, ನೆರೆಯಿಂದಾಗಿ ಹೊರಗೆ ಬರಲಾಗದೆ ಹೋಮ್ ಸ್ಟೇನಲ್ಲಿ 40 ಮಂದಿ ವಾಸವಾಗಿದ್ದಾರೆ. ಇಲ್ಲಿರುವ ಮಕ್ಕಳು, ವೃದ್ಧರು ಸಂಕಷ್ಟಗೆ ಒಳಗಾಗಿ ನೆರವಿಗಾಗಿ ಪರಿತಪಿಸುತ್ತಿದ್ದಾರೆ. ಸುತ್ತಮುತ್ತದ ಮನೆಯವರು ಹೋಮ್ಸ್ಟೇನಲ್ಲಿ ಕಳೆರೆರಡು ದಿನಗಳಿಂದ ಉಳಿದುಕೊಂಡು ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ. ಆಹಾರ, ಅಗತ್ಯ ಸಾಮಾಗ್ರಿಗಳಿಲ್ಲದೆ ಸಂತ್ರಸ್ತರು ಕತ್ತಲೆಯಲ್ಲಿಯೇ ಕಾಲ ಕಳೆಯುವಂತಾಗಿದೆ.