ವಿಟ್ಲ, ಆ 20: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಎಸೈ ಯಲ್ಲಪ್ಪ ನೇತೃತ್ವದ ತಂಡ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ವಿಟ್ಲ ಮುಡ್ನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ನಿವಾಸಿಗಳಾದ ಎಲ್ಯಣ್ಣ ಪೂಜಾರಿ, ಕೃಷ್ಣ ನಾಯ್ಕ, ಪೂವಪ್ಪ ಹಾಗೂ ದಾಮೋದರ ಬಂಧಿತ ಆರೋಪಿಗಳು.
ಇವರು ವಿಟ್ಲ ಮುಡ್ನೂರು ಗ್ರಾಮದ ಕೆಮನಾಜೆ ಎಂಬಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ಅಕ್ರಮ ಪತ್ತೆಯಾಗಿದೆ. ಇನ್ನು ಆರೋಪಿಗಳಿಂದ ನಾಲ್ಕು ಕೋಳಿ ಹಾಗೂ 10 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.